ಗಾಮನಗಟ್ಟಿಯಲ್ಲಿ ಮತದಾನ ಸ್ಥಗಿತ...ವಿವಿಪ್ಯಾಡ್ ಅಗ್ರಹಿಸಿ ಅಭ್ಯರ್ಥಿಯ ಬೆಂಬಲಿಗರು

ಹುಬ್ಬಳ್ಳಿ-ಧಾ ಮಾಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಲು ಮುಂದಾಗುತ್ತಿದ್ದಾರೆ. ಆದರೆ ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ಕಳೆದ ಒಂದು ಗಟೆಯಿಂದ ವಿವಿಪ್ಯಾಡ್ ನೀಡುವಂತೆ ಅಗ್ರಹಿಸಿ ಪಾಲಿಕೆ ಅಭ್ಯರ್ಥಿಗಳ ಬೆಂಬಲಿಗರು ಮತದಾನ ಸ್ಥಗಿತ ಮಾಡಿದ್ದು, ಮತದಾನ ಕೇಂದ್ರ ಬಳಿ ಗೊಂದಲ ಏರ್ಪಟಿದೆ.ಅವಳಿನಗರ ಪಾಲಿಕೆ ವ್ಯಾಪ್ತಿಯ 28 ನೇ ವಾರ್ಡ ಇದಾಗಿದ್ದು, ವಿವಿ ಪ್ಯಾಡ್ ನೀಡುವಂತೆ ಅಗ್ರಹಿಸಿ ೫ ಮತಗಟ್ಟೆಗಳಲ್ಲಿ ಮತದಾನ ಸ್ಥಗಿತ ಮಾಡಲಾಗಿದೆ. ಪಾಲಿಕೆ ಚುನಾವಣೆಯ ಅಭ್ಯರ್ಥಿಯ ಬೆಂಬಲಿಗರು ಮತದಾನ ಕೇಂದ್ರ ಕಡೆ ಆಗಮಿಸಿ ನಮ್ಮಗೆ ವಿವಿಪ್ಯಾಡ್ ಮತದಾನ ಸೌಲಭ್ಯ ನೀಡಿಬೇಕು. ಎಲ್ಲಿಯವರೆಗೂ ವಿವಿ ಪ್ಯಾಡ್ ಮತದಾನ ಸೌಲಭ್ಯ ನೀಡುವುದಿಲ್ಲ ಅಲ್ಲಿಯವರೆಗೆ ಮತದಾನ ಮಾಡಲು ನಾವು ಬೀಡುವುದಿಲ್ಲವೆಂದು ಒತ್ತಾಯ ಮಾಡಿ ಮತದಾನ ಸ್ಥಗಿತ ಮಾಡಿದ್ದಾರೆ. ಗಾಮನಗಟ್ಟಿಯ ಮತಗಟ್ಟೆ ಸಂಖ್ಯೆ 6.7.8.9.10 ಮತಗಟ್ಟೆಯಲ್ಲಿ ಮತದಾನ ಸ್ಥಗಿತ ಮಾಡಲಾಗಿದ್ದು, ಜಿಲ್ಲಾ ಚುನಾವಣೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವವರೆಗೂ ಮತದಾನ ನಡೆಸಬಾರದು ಎಂದು ಮತಗಟ್ಟೆಯ ಚುನಾವಣೆ ಸಿಬ್ಬಂದಿಗಳಿಗೆ ಅಭ್ಯರ್ಥಿಯ ಬೆಂಬಲಿಗರು ಮನವಿ ಮಾಡುತ್ತಿದ್ದು, ಮತದಾನ ಕೇಂದ್ರದ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮತದಾನ ಮಾಡಲು ಬಂದ ಮತದಾರರಿಗೆ ಅಭ್ಯರ್ಥಿಯ ಬೆಂಬಲಿಗರು, ವಿವಿ ಪ್ಯಾಡ್ ಬರುವವರೆಗೂ ಮತದಾನ ಮತದಾನ ಮಾಡದಂತೆ ಹೇಳುತ್ತಿದ್ದು, ಮತದಾನ ಕೇಂದ್ರಕ್ಕೆ ಬಂದ 28 ನೇ ವಾರ್ಡಿನ ಮತದಾರರು ಗೊಂದಲದಲ್ಲೇ ಸಂವಿಧಾನಿಕ ಹಕ್ಕು ಚಲಾನೆ ಮಾಡದೇ ಮರಳಿ ಮನೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ.