'ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಉಪನ್ಯಾಸಕ' : ಅದೊಂದು ಗಂಭೀರ ವಿಚಾರವಲ್ಲ ಎಂದ ಸಚಿವ ಬಿ.ಸಿ ನಾಗೇಶ್

'ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಉಪನ್ಯಾಸಕ' : ಅದೊಂದು ಗಂಭೀರ ವಿಚಾರವಲ್ಲ ಎಂದ ಸಚಿವ ಬಿ.ಸಿ ನಾಗೇಶ್

ಬೆಂಗಳೂರು : ತರಗತಿಯೊಳಗೆ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ. ಘಟನೆ ಕುರಿತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಈ ಕುರಿತು ಸುದ್ದಿಗಾರರ ಜೊತೆ ಪ್ರತಿಕ್ರಿಯೆ ನೀಡಿದ ಸಚಿವ ಬಿ ಸಿ ನಾಗೇಶ್ ಇದೊಂದು ಚಿಕ್ಕ ವಿಷಯ, ಆದರೆ ಅದನ್ನೇ ದೊಡ್ಡದು ಮಾಡಲಾಗುತ್ತಿದೆ.

ಈ ರೀತಿ ಘಟನೆ ನಡೆಯಬಾರದಿತ್ತು, ಆದರೆ ನಡೆದು ಹೋಗಿದೆ. ಶಿಕ್ಷಕರು ಆ ಪದವನ್ನು ಬಳಸಬಾರದಿತ್ತು, ಆದರೆ ಇದು ಗಂಭೀರ ವಿಷಯವಲ್ಲ ಎಂದು ನಾನು ಭಾವಿಸುತ್ತೇನೆ , ಈ ವಿಚಾರವನ್ನು ವಿವಾದ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ

ಉಡುಪಿ ಜಿಲ್ಲೆಯ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನ ಪ್ರೊಫೇಸರ್ ಒಬ್ಬರು, ನವೆಂಬರ್ 26ರಂದು ತರಗತಿಯಲ್ಲಿಯೇ ಮುಸ್ಲೀಂ ವಿದ್ಯಾರ್ಥಿಗಳನ್ನು ಟೆರರಿಸ್ಟ್ ಎಂಬುದಾಗಿ ನಿಂಧನೆ ಮಾಡಿದ್ದಾರೆ ಎನ್ನಲಾಗಿದೆ.ತರಗತಿಯಲ್ಲಿಯೇ ಹೀಗೆ ನಿಂದಿಸಿದಂತ ಪ್ರಧ್ಯಾಪಕರನ್ನು ವಿದ್ಯಾರ್ಥಿಗಳು ಅಲ್ಲಿಯೇ ಪ್ರಶ್ನಿಸಿದ್ದಾರೆ. ಜೊತೆಗೆ ಮುಸ್ಲೀಂ ಸಮುದಾಯವನ್ನು ಟೆರರಿಸ್ಟ್ ಎಂದು ಕರೆಯಬೇಡಿ. ನಾವು ನಿಮ್ಮ ಮಕ್ಕಳಂತೆ. ನಿಮ್ಮ ಮಕ್ಕಳನ್ನು ಹೀಗೆ ಮಾತನಾಡಿಸುತ್ತೀರಾ ಎಂಬುದಾಗಿ ಆಕ್ಷೇಪಿಸಿದ್ದಾರೆ.

ವಿದ್ಯಾರ್ಥಿಗಳು ಆಕ್ಷೇಪಿಸಿದ ಬಳಿಕ, ಪ್ರಾಧ್ಯಾಪಕರು ಕ್ಷಮೆ ಕೂಡ ಯಾಚಿಸಿದ್ದಾರೆ. ಆದ್ರೇ ಟೆರರಿಸ್ಟ್ ಎಂದು ಹೇಳಿ, ನೀವು ಕ್ಷಮೆ ಕೇಳಿದ ತಕ್ಷಣ ಮಾಡಿದಂತ ಆರೋಪ ಬದಲಾಗೋದಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಎಲ್ಲಾ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ವೀಡಿಯೋ ವೈರಲ್ ಆಗುತ್ತಿದ್ದಂತೆ ಸೂಕ್ಷ್ಮತೆಯನ್ನು ಅರಿತಂತ ಮಾಹೆ ವಿವಿಯು, ಪ್ರೊಫೇಸರ್ ಅವರ ಮೇಲೆ ಆಂತರೀಕ ತನಿಖೆಗೆ ಆದೇಶಿಸಿದೆ. ಅಲ್ಲದೇ ಅಮಾನತುಗೊಳಿಸಲಾಗಿದೆ.