ಅಕ್ರಮ ಮಸೀದಿ ನಿರ್ಮಾಣ ವಿವಾದ; ಫಾತಿಮಾ ಮಸೀದಿಗೆ ಬೀಗ ಜಡಿದ ಪಾಲಿಕೆ

ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್ ಸದ್ದು ಕೇಳಿಬಂದಿತ್ತು. ಮನೆಯನ್ನೇ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಬಗ್ಗೆ ಇದೀಗ ಮಹಾನಗರ ಪಾಲಿಕೆ, ಫಾತೀಮಾ ಮಸೀದಿಗೆ ಬೀಗ ಜಡಿದಿದೆ. ಮಸೀದಿ ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳು, ಬಿಜೆಪಿಯವರು ಒತ್ತಾಯಿಸಿದ್ದರು. ಈ ಹಿನ್ನೆಲ ಮಹಾನಗರ ಪಾಲಿಕೆ ಮಸೀದಿಯಲ್ಲಿ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ನೋಟಿಸ್ ನೀಡಿತ್ತು. ನೋಟಿಸ್‌ಗೆ ಕ್ಯಾರೆ ಎನ್ನದ ಕಾರಣ, ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಮಸೀದಿಗೆ ಬೀಗ ಹಾಕುವಂತೆ ನೋಟಿಸ್ ನೀಡಿದ್ದಾರೆ.