ಕೂಲಿ ಕಾರ್ಮಿಕರಿಗೆ ಕೇಂದ್ರದಿಂದ ಭರ್ಜರಿ ಸಿಹಿಸುದ್ದಿ

ಕೂಲಿ ಕಾರ್ಮಿಕರಿಗೆ ಕೇಂದ್ರದಿಂದ ಭರ್ಜರಿ ಸಿಹಿಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಅನೇಕ ಜಿಲ್ಲೆಗಳ ಜನರು ನೆರೆ, ಪ್ರವಾಹ, ಅತಿವೃಷ್ಠಿಯಿಂದಾಗಿ ( Flood Affected ) ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸವಿಲ್ಲದೇ ಜೀವನ ನಡೆಸೋದು ಕಷ್ಟವಾಗಿದೆ. ಈ ಜನರ ಬೆಂಬಲಕ್ಕೆ ನಿಂತಿರುವಂತ ಕೇಂದ್ರ ಸರ್ಕಾರ ( Union Government ) ಉದ್ಯೋಗ ಖಾತ್ರಿ ಯೋಜನೆಯಡಿ ( Udyoga Khatri Yojana ) 100 ದಿನದ ಕೂಲಿ ಕೆಲಸದ ಜೊತೆಗೆ 50 ದಿನ ಹೆಚ್ಚುವರಿ ಕೆಲಸ ನೀಡುವುದಾಗಿ ಘೋಷಿಸಿದೆ.

ಈ ಮೂಲಕ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್ ನೀಡಿದೆ.

ರಾಜ್ಯದ 17 ಪ್ರವಾಹ ಪೀಡಿತ ಜಿಲ್ಲೆಗಳ 99 ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸದ ಕಾಲಾವಧಿಯನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ರಾಜ್ಯದ ಮನವಿ ಪರಿಗಣಿಸಿರುವಂತ ಕೇಂದ್ರ ಸರ್ಕಾರವು, ನೆರೆ ಪೀಡಿತ ಪ್ರದೇಶಗಳಲ್ಲಿ ಕೂಲಿ ಸಿಗದೆ ಕಂಗಾಲಾಗಿದ್ದ ಕಾರ್ಮಿಕರಿಗೆ ಈಗಿರುವ 100 ದಿನಗಳ ಜೊತೆಗೆ 50 ದಿನಗಳ ಹೆಚ್ಚುವರಿ ಕೆಲಸ ಒದಗಿಸಲು ಅನುಮತಿ ನೀಡಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಈಗಿರುವ 100 ದಿನದ ಕೂಲಿ ಜೊತೆಗೆ 50 ದಿನ ಹೆಚ್ಚುವರಿ ಕೂಲಿ ಒದಗಿಸಲು ಅನುಮತಿ ನೀಡಿದೆ. ಈ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೂಲಿ ಸಿಗದೇ ಜೀವನೋಪಾಯಕ್ಕೂ ಕಷ್ಟ ಪಡುತ್ತಿದ್ದಂತ ಜನರಿಗೆ ಕೇಂದ್ರ, ಸರ್ಕಾರದ ಈ ಆದೇಶ ಹೊಸ ಭರವಸೆ ಮೂಡಿಸುವಂತೆ ಆಗಿದೆ.