ಕಾಂಗ್ರೆಸ್ ಸುಳ್ಳಿನ ಸರಮಾಲೆಯಲ್ಲಿ ಬದುಕಿದೆ
ದೇಶದಲ್ಲಿ ಸುಳ್ಳು ಮೋಸ ವಂಚನೆಗೆ ಇನ್ನೊಂದು ಹೆಸರೇ ಕಾಂಗ್ರೆಸ್. ಕಾಂಗ್ರೆಸ್ ಸುಳ್ಳಿನ ಸರಮಾಲೆಯಲ್ಲಿ ಬದುಕಿದೆ ಎಂದು ಕೊಪ್ಪಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲು ಆರೋಪಿಸಿದರು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಎರಡು ಕೆಲಸ ಮಾಡುತ್ತೆ. ಒಂದು ಗಲಭೆ ಸೃಷ್ಟಿ ಮಾಡೋದು, ಇನ್ನೊಂದು ಸುಳ್ಳು ಸೃಷ್ಟಿ ಮಾಡೋದು. ನಂತರ ಗಲಭೆ ಸೃಷ್ಟಿ ಮಾಡಿ ಅಧಿಕಾರ ಹಿಡಿಯೋದು ಎಂದ ಕಟೀಲು ರೈತರನ್ನು ಎತ್ತಿ ಕಟ್ಟಿ ಬೆಂಕಿ ಹಚ್ಚಿದ್ರು ಎಂದರು.