UPSC NDA 2 2021 Notification Out: ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿಯಲ್ಲಿನ 400 ಹುದ್ದೆಗಳಿಗೆ ಅರ್ಜಿ ಆಹ್ವಾನ
ಡಿಜಿಟಲ್ ಡೆಸ್ಕ್: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ 2 2021 (ಎನ್ ಡಿಎ 2) ಅಧಿಸೂಚನೆ ಎಫ್ ಅನ್ನ ತನ್ನ ವೆಬ್ ಸೈಟ್ʼನಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಯುಪಿಎಸ್ಸಿ ಎನ್ ಡಿಎ ಆನ್ ಲೈನ್ ಅಪ್ಲಿಕೇಶನ್ ಲಿಂಕ್ ಯುಪಿಎಸ್ಸಿ ಆನ್ಲೈನ್ ವೆಬ್ಸೈಟ್ʼನಲ್ಲಿ 29 ಜೂನ್ 2021ರವರೆಗೆ ಲಭ್ಯವಿರಲಿದೆ.
upsconline.nic.in. ಆನ್ ಲೈನ್ ಅರ್ಜಿಗಳನ್ನ 06 ಜುಲೈ 2021ರಿಂದ 12ಜುಲೈ 2021 ರವರೆಗೆ ಸಂಜೆ 6:00 ರವರೆಗೆ ಹಿಂಪಡೆಯಬಹುದು. ತಮ್ಮ ಅರ್ಜಿಯನ್ನ ಯಶಸ್ವಿಯಾಗಿ ಸಲ್ಲಿಸುವ ಅಭ್ಯರ್ಥಿಗಳನ್ನ ಯುಪಿಎಸ್ಸಿ ಎನ್ ಡಿಎ 1 ಪರೀಕ್ಷೆಗೆ ಕರೆಯಲಾಗುತ್ತದೆ. ಅಂದ್ಹಾಗೆ, ಈ ಪರೀಕ್ಷೆ 05 ಸೆಪ್ಟೆಂಬರ್ 2021 ರಂದು ನಡೆಯಲಿದೆ.
148ನೇ ಕೋರ್ಸ್ʼಗಾಗಿ ಎನ್ ಡಿಎಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವಿಭಾಗಗಳಿಗೆ ಪ್ರವೇಶಕ್ಕಾಗಿ ಮತ್ತು 2022ರ ಜುಲೈ 2ರಿಂದ ಆರಂಭವಾಗಲಿರುವ 110ನೇ ಭಾರತೀಯ ನೌಕಾ ಅಕಾಡೆಮಿ ಕೋರ್ಸ್ (ಐಎನ್ ಎಸಿ)ಗೆ ಒಟ್ಟು 400 ಹುದ್ದೆಗಳು ಖಾಲಿ ಇವೆ.