ಜನರೇ ಎಚ್ಚರ, ಇಂದಿನಿಂದ ಮತ್ತೆ ಸೈಕ್ಲೋನ್: ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಸಂದೇಶ

ಜನರೇ ಎಚ್ಚರ, ಇಂದಿನಿಂದ ಮತ್ತೆ ಸೈಕ್ಲೋನ್: ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಸಂದೇಶ
ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ (Rainfall) ಮತ್ತೆ ರಾಜ್ಯಕ್ಕೆ  ಎಂಟ್ರಿಯಾಗಲಿದ್ದಾನೆ. ಇಂದಿನಿಂದ ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ಸಹ ನೀಡಲಾಗಿದೆ.
ಮತ್ತೆ ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತಗೊಂಡಿರುವ ಪರಿಣಾಮ ಮೊದಲು ತಮಿಳುನಾಡಿನ (Tamilnadu) ರಾಜಧಾನಿ ಚೆನ್ನೈ (Chennai Rains) ಎದುರಿಸಲಿದೆ. ನಂತರ ಕರ್ನಾಟಕದ ಮೈಸೂರು ಭಾಗ ಸಹ ಸೈಕ್ಲೋನ್ ಗೆ (Cyclone) ಒಳಪಡಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಹಮಾಮಾನ ಇಲಾಖೆ (IMD) ಹೇಳಿದೆ.

ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ(Rainfall)ಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ (Winter) ಸಹ ರಾಜ್ಯದಲ್ಲಿ (Karnataka Rains) ಆರಂಭವಾಗಲಿದೆ. ಉತ್ತರ ಕರ್ನಾಟಕ  ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.

ಜಿಲ್ಲಾವಾರು ಹವಾಮಾನ ವರದಿ

ಬೆಂಗಳೂರು 26-19, ಮಂಗಳೂರು 31-24, ಚಿಕ್ಕಬಳ್ಳಾಪುರ 24-17, ಕೋಲಾರ 26-19, ಮೈಸೂರು 27-19, ರಾಮನಗರ 28-20, ಮಂಡ್ಯ 28-19, ಚಾಮರಾಜನಗರ 27-20, ಹಾಸನ 27-18, ಚಿಕ್ಕಮಗಳೂರು 27-17, ದಾವಣಗೆರೆ 31-19, ಬೀದರ್ 30-17, ಕಲಬುರಗಿ 32-18, ರಾಯಚೂರು 31-19, ಬಾಗಲಕೋಟೆ 32-18, ವಿಜಯಪುರ 31-18, ಬೆಳಗಾವಿ 30-17, ಧಾರವಾಡ 30-18, ಹಾವೇರಿ 31-18, ಕೊಪ್ಪಳ 31-19, ಗದಗ 31-18, ಹಾವೇರಿ 31-18, ಚಿತ್ರದುರ್ಗ 29-18, ಮತ್ತು ಬಳ್ಳಾರಿ 31-19

ಇನ್ಮುಂದೆ ಬೆಂಗಳೂರಿಂದ Hyderabad‌ಗೆ ರಸ್ತೆ ಮಾರ್ಗವಾಗಿ ಇನ್ನೂ ಬೇಗ ತಲುಪಬಹುದು.. ಹೇಗೆ ಅಂತ ಇಲ್ಲಿ ನೋಡಿ

ಮಳೆ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್. ನವೆಂಬರ್ 25, 26 ಮತ್ತು 27ರಂದು ಮಳೆಯಾಗಲಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಸೈಕ್ಲೋನ್ ನನ್ನು ಮೊದಲು ಚೆನ್ನೈ ಎದುರಿಸಲಿದೆ.

ಈ ಸೈಕ್ಲೋನ್ ಮಳೆ ಬೆಂಗಳೂರು, ಮೈಸೂರು ಭಾಗ ಮತ್ತು ಉಡುಪಿಯವರೆಗೆ ಸುರಿಯಲಿದೆ. ಮುಂಜಾಗ್ರತ ಕ್ರಮಗಳೊಂದಿಗೆ ಸಿದ್ಧರಾಗಿರುವಂತೆ ಹೇಳಲಾಗಿದೆ. ಡಿಸೆಂಬರ್ 2ರ ನಂತರ ಮತ್ತೊಮ್ಮೆ ಮಳೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಮಾಹಿತಿ ದೃಢಪಟ್ಟಿಲ್ಲ ಎಂದು ತಿಳಿಸಿದರು.

ಬೆಳೆ ಹಾನಿಗೆ ಪರಿಹಾರ ನೀಡುವ ಭರವಸೆ

ಮಳೆ ಹಾನಿ ಕುರಿತು ವರದಿ ಪಡೆಯಲಾಗುತ್ತಿದೆ. ಕೇವಲ ರಾಗಿ ಬೆಳೆಗಾರರಿಗೆ ಮಾತ್ರ ಪರಿಹಾರ ನೀಡಲಾಗುತ್ತೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಬೆಳೆ ಹಾನಿಗೆ ಒಳಗಾದ ಎಲ್ಲರಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಚಿವ ಅಶೋಕ್ ಭರವಸೆ ನೀಡಿದರು.

ತಮಿಳುನಾಡಿನಲ್ಲಿ ರೆಡ್ ಅಲರ್ಟ್

ತಮಿಳುನಾಡಿನಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಚೆನ್ನೈ ಸೇರಿದಂತೆ ಚೆಂಗಲಗಟ್ಟು, ತಿರುವಳ್ಳೂರ್ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷನೆ ಮಾಡಲಾಗಿದೆ. ತಮಿಳುನಾಡಿನ ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

 ಬೆಳೆಗಾರರ ಕೈಗೆಟುಕದ ದ್ರಾಕ್ಷಿ.. ಹಣ್ಣಿನ ಜೊತೆ ರೈತರ ನೆಮ್ಮದಿಯನ್ನು ಆಪೋಷನ ಪಡೆದ ವರುಣ

ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು

ಅಕಾಲಿಕ ಮಳೆಯಿಂದ ಗದ್ದೆಗಳಿಲ್ಲಿ ನೀರು ತುಂಬಿ ಜಮೀನು ಕೆಸರು ಗದ್ದೆಮತಾಗಿದೆ. ಚಿಕ್ಕೋಡಿ, ರಾಯಬಾಗ, ಅಥಣಿ, ಹುಕ್ಕೇರಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಕಟಾವು ಮಾಡಿದ ಕಬ್ಬು ಕಾರ್ಖಾನೆಗೆ ಕಳಿಸಲಾಗದೆ ರೈತ ಪರದಾಡುತ್ತಿದ್ದಾನೆ. ಮಳೆಯಿಂದ ಜಮೀನುಗಳಿಗೆ ಟ್ರಾಕ್ಟರಗಳು ಬರುತ್ತಿಲ್ಲಾ. ಗದ್ದೆಗಳಲ್ಲಿ ಟ್ರಾಕ್ಟರ್ ಗಳು ಸಿಲುಕಿ ಕೊಂಡಿದ್ದು ಟ್ರಾಕ್ಟರ್ ಗಳನ್ನ ಹೊರ ತೆಗೆಯಲು ರೈತರು ಹರ ಸಾಹಸ ಪಡುತ್ತಿದ್ದಾರೆ. ಪರಿನಾಮ ಕಟಾವು ಮಾಡಿದ ಕಬ್ಬು ಗದ್ದೆಯಲ್ಲೇ ಬೀಳುವಂತಾಗಿದೆ.