ಗಾನ ಚಂದನ ಕಾರ್ಯಕ್ರಮ ಯುವ ಗಾಯಕಿ: ಗೌರಮ್ಮ ಮರಡಿ

ಶಿಗ್ಗಾಂವಿ ತಾಲೂಕಿನ ಇತಿಹಾಸವನ್ನು ನೋಡಿದಾಗ ಅನೇಕ ಸಾಧು ಸಂತರು ಶರಣರು ಮಹಾತ್ಮರು ಶಿವಯೋಗಿಗಳು ಪುಣ್ಯಪುರುಷರು ಮತ್ತು ತಮ್ಮ ಕಲೆಯ ಮುಖಾಂತರ ಮೇಲೆತ್ತರಕ್ಕೆ ಅನೇಕ ಕಲಾವಿದರು ಹೋಗಿದ್ದುಂಟು ಅದರಲ್ಲಿ ತಾಲೂಕಿನ ಹುಲ್ಗೂರ್ ಗ್ರಾಮದ ಕುಮಾರಿ ಗೌರಮ್ಮ ಮರಡಿ ಒಬ್ಬರು.ಹಲಗೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅವರು ಬಡತನ ಪರಿಸ್ಥಿತಿಯಲ್ಲಿ ಬೆಳೆದವರು. ಗೌರಮ್ಮ ತಂದೆ ಮತ್ತು ತಾಯಿಯ ಕೃಷಿ ಅವಲಂಬಿತ ಕುಟುಂಬದವರು ಮೊದಲಿನಿಂದ ಗೌರಮ್ಮನಿಗೆ ಪ್ರಾರ್ಥನೆ ಮಾಡುವುದು ಮತ್ತು ಹಾಡನ್ನು ಹೇಳುವುದು ಮತ್ತು ಕೇಳುವುದು ಬಹಳ ಇಷ್ಟ ಹಾಗೂ ದೂರದರ್ಶನ ಮಾಧ್ಯಮ ಮತ್ತು ಚಲನಚಿತ್ರದಲ್ಲಿ ವಿಶೇಷ ಹಾಡುಗಳನ್ನು ಹೇಳುವ ಹವ್ಯಾಸ ಮಾಡಿಕೊಂಡಿದ್ದರು.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತು ಬೇರೆ ಬೇರೆ ತಾಲೂಕಿನಲ್ಲಿ ತಮ್ಮ ಸಂಗೀತ ಕಾರ್ಯಕ್ರಮದ ಮುಖಾಂತರ ನಾಡಿನಾದ್ಯಂತ ಸಂಗೀತ ಪ್ರಿಯರಿಗೆ ಚಿರಪರಿಚಿತರಾಗಿದ್ದ ಅವರು ಒಳ್ಳೆಯ ಅವಕಾಶ ದೊರಕಿದರೆ ಮೇಲೆತ್ತರಕ್ಕೆ ಹೋಗುವುದರಲ್ಲಿ ಸಂದೇಹವಿಲ್ಲ ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಂಬಲದ ಅವಶ್ಯಕತೆ ಇದೆ ಎಂದು ಹೇಳಬಹುದು.