ಇಬ್ಬರು ಮಾತೆಯರ ಕಚ್ಚಾಟ | Bidar |

ಬಸವಗಿರಿಯ ಶರಣ ಉದ್ಯಾನ ವನದಲ್ಲಿ ಶ್ರಾವಣ ಮಾಸದ ನಿಮಿತ್ತ ಪ್ರವಚನ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣ-ಗಂಗಾAಬಿಕೆ ಎಂಬವರು ಏಕ ವಚನದಲ್ಲಿ ಕಚ್ಚಾಟ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಇದರಿಂದ ಬೇಸರಗೊಂಡ ಗಂಗಾಬಿಕೆ ಪ್ರವಚನ ನಡೆಸಲು ಅವಕಾಶ ನೀಡದಂತೆ ಜಿಲ್ಲಾ ವರಿಷ್ಠಾಧಿಕಾರಿ ಬಳಿ ದೂರು ನೀಡಿದ್ದಾರೆ. ಪ್ರತಿಯಾಗಿ ಅಕ್ಕ ಅನ್ನಪೂರ್ಣ ಕೂಡ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಇಬ್ಬರು ಮಾತೆಯರ ನಡುವಿನ ಆಂತರಿಕ ಕಿತ್ತಾಟದಿಂದ ಅಪಾರ ಪ್ರಮಾಣದ ಬಸವ ನಾಡಿನ ಭಕ್ತಾದಿಗಳಿಗೆ ಬೇಸರ ಮೂಡಿಸಿದೆ.