ಬ್ರಿಮ್ಸ್ ಆಸ್ಪತ್ರೆಗೆ ಡಿಸಿ ದಿಢೀರ್ ಭೇಟಿ ಸ್ಥಳದಲ್ಲೇ ತರಾಟೆ | Bidar |
ಬೀದರ್ ಬ್ರಿಮ್ಸ್ ಕಟ್ಟಡದ ದುರಸ್ತಿ ಪ್ರಕ್ರಿಯೆ ಪೂರ್ಣವಾಗದೇ ಯಥಾಸ್ಥಿತಿ ಮುಂದುವರೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಭೇಟಿ ನೀಡಿದರು. ಬರೋಬ್ಬರಿ ಎರಡು ಗಂಟೆಗೂ ಹೆಚ್ಚು ಕಾಲ ಬ್ರಿಮ್ಸ್ ಕಟ್ಟಡದ ಆಯಾ ವಿಭಾಗಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಆಯಾ ಕಡೆಗಳಲ್ಲಿನ ಕಟ್ಟಡದ ದುಸ್ಥಿತಿಯನ್ನು ಖುದ್ದು ವೀಕ್ಷಣೆ ನಡೆಸಿದರು. ಸೂಕ್ತ ವಿವರಣೆ ನೀಡದ ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡು, ಪ್ರತಿಯೊಂದು ವ್ಯವಸ್ಥೆಯು ಸರಿಗೊಳಿಸುವಂತೆ ಎಚ್ಚರಿಕೆ ನೀಡಿದರು.