ಬೆಂಗಳೂರು, ಧಾರವಾಡ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಭಾರಿ ಮಳೆ

ಬೆಂಗಳೂರು, ಧಾರವಾಡ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಭಾರಿ ಮಳೆ

ಬೆಂಗಳೂರು;, ಧಾರವಾಡ, ಹುಬ್ಬಳ್ಳಿ, ಕೊಪ್ಪಳ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಸೋಮವಾರ ರಾತ್ರಿಯಿಂದ ಭಾರಿ ಮಳೆಯಾಗಿದೆ.ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಕೂಡ ಹಲವು ಕಡೆಗಳಲ್ಲಿ ಮಳೆ ಮುಂದು;ವರಿದಿದೆ.

ಹುಬ್ಬಳ್ಳಿಯಲ್ಲಿ ಮಳೆಯ ಅವಾಂತರ ಮುಂದುವರಿದಿದೆ.

ಮಳೆಯ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆನೀರಲ್ಲಿ‌ ಹಲವಾರು ಬೈ‌ಕ್‌ಗಳು ಕೊಚ್ಚಿ ಹೋಗಿವೆ.

ಮಧುರಾ ಕಾಲನಿ, ದಾಜೀಬಾನ ಪೇಟೆ, ಕುಂಬಾರ ಓಣಿ, ಲೋಕಪ್ಪನ ಹಕ್ಕಲ, ಮಂಜುನಾಥ ನಗರ ಸೇರಿ ಹಲವು ಬಡಾವಣೆಗಳು ಜಲಾವೃತವಾಗಿವೆ. ಮನೆ, ಅಪಾರ್ಟ್ ಮೆಂಟ್‌ಗಳಿಗೆ ಮಳೆ ನೀರು ನುಗ್ಗಿದೆ.

ಧಾರವಾಡದಲ್ಲಿ ಬಿಟ್ಟು ಬಿಡದೆ ಸುರಿದ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಧಾರವಾಡ ಉಪ್ಪಿನ ಬೆಟಗೇರಿ ಮದ್ಯದ ರಸ್ತೆ ಸಂಪರ್ಕ ಕಡಿತವಾಗಿದೆ. ದಾಸನಕೊಪ್ಪ ಕ್ರಾಸ್ ಬಳಿ ಹಳ್ಳ ತುಂಬಿ ಹರಿಯುತ್ತಿದೆ. ರಾತ್ರಿಯಿಡಿ ಹಳ್ಳ ದಾಟಲು ಜನರು, ವಾಹನ ಸವಾರರು ಪರದಾಡಿದರು. ಮಳೆಗೆ ತುಪ್ರಿ ಹಾಗೂ ಬೆಣ್ಣಿ ಹಳ್ಳಕ್ಕೆ ದೊಡ್ಡ‌ ಪ್ರಮಾಣದಲ್ಲಿ ನೀರು ಹರಿದುಬಂತು. ಇದರಿಂದ ಸ್ಥಳೀಯ ಗ್ರಾಮಗಳಿಗೆ ಕೂಡ ನೀರು ನುಗ್ಗಿತು.

ಧಾರವಾಡ ಜಿಲ್ಲೆಯ ನವಲಗುಂದ ತಾಲುಕಿನ ಅರೇಕುರಹಟ್ಟಿ, ಮೊರಬ ಹಾಗೂ ಶಿರಕೋಳದಲ್ಲಿ ನೆರೆ ಪರಿಸ್ಥಿತಿ ಉಂಟಾಯಿತು. ಸೋಮವಾರ ರಾತ್ರಿ ಧಾರವಾಡ ಜಿಲ್ಲೆಯ ಗಡಿ ಭಾಗದಲ್ಲಿ ಮಳೆಯಿಂದ ಎರಡೂ‌ ಹಳ್ಳಕ್ಕೆ ನೀರು ಬಂತು.

ರಾಜಾಜಿ ನಗರ, ಮಲ್ಲೇಶ್ವರ, ಮೆಜೆಸ್ಟಿಕ್, ವಿಜಯನಗರ, ಯಶವಂತಪುರ, ವಿಧಾನಸೌಧ, ಕಾರ್ಪೊರೇಷನ್ ಸುತ್ತಮುತ್ತ ಮಳೆ ಮಂಗಳವಾರ ಬೆಳಗ್ಗೆಯೂ ಮುಂದುವರಿದಿದೆ.