ರಾಜ್ಯದಲ್ಲಿ ಡಿಎಪಿ ರಸಗೊಬ್ಬರ ಕೊರತೆ ರೈತರು ಕಂಗಾಲು

ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಅನ್ನದಾತರು ಬೆಳೆಗೆ ಪೂರಕವಾದ ರಸಗೊಬ್ಬರ ಹಾಕಿ ಬಿತ್ತನೆ ಆರಂಭಿಸಿದ್ದಾರೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಡಿಎಪಿ ಹಾಗೂ ಯೂರಿಯಾ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಸಚಿವ
ಹಾಲಪ್ಪ ಆಚಾರ್ ಅವರಿಗೆ ರೈತ ಸಂಘಟನೆ ಡಿ ಎ ಪಿ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಹೌದು ರಾಜ್ಯದಲ್ಲಿ ಡಿಎಪಿ ರಸಗೊಬ್ಬರ ಕೊರೆತೆ ಇದ್ದರು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಆಗಲಿ ಕೆಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆವಾಗಲಿ ವಿಧಾನ ಸೌಧದಲ್ಲಿ ರಾಜ್ಯದ ರೈತರ ಬಗ್ಗೆ ಒಂದು ದಿನ ಕೂಡ ಚರ್ಚಿಸಿಲ್ಲ. ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ರೈತರ ಸಮಸ್ಯೆಗಳನ್ನು
ಆಲಿಸಬೇಕು, ರೈತರಿಗೆ ಡಿಎಪಿ ರಸಗೊಬ್ಬರ ಸಂದಾಯ ಮಾಡಬೇಕು. ಅಷ್ಟೇ ಅಲ್ಲ ಸರಿಯಾದ ಸಮಯಕ್ಕೆ ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆ ಇನ್ನೂ ಕೆಲವು ರೈತರಿಗೆ ಬಂದಿಲ್ಲ ಕೆಳೆದ ವರ್ಷ ರಾಜ್ಯದ ರೈತರಿಗೆ ವಿವಿಧ ಬೆಳೆಗಳು ಅತಿವೃಷ್ಟಿಯಿಂದ ಹಾಳಾದರು ಕೂಡ ಇಲ್ಲಿಯವರೆಗೂ ಪರಿಹಾರ ಸಿಕ್ಕಿಲ್ಲಾ ಶೀಘ್ರದಲ್ಲಿ ರಾಜ್ಯದ ರೈತರಿಗೆ ಎಲ್ಲಾ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತ ಸಂಘನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರೈತರಾದ ರವಿಕುಮಾರ್ ಜಕ್ಕಲಿ.ವಿರಣ್ಣ ಹೂಗಾರ.ಹನಮಂತಪ್ಪ ಆಲೂರು.ಪರಮೇಶೆ ಹನಸಿ.ನಿಂಗಪ್ಪ ಕೋಳೂರ. ಶಿವನಂದಪ್ಪ ಸಾದರ.ಶರಣಪ್ಪ ಗುಡಮ್ಮಿ.ವಿರೇಶ ಗಿಣಿಗೇರಾ.ಇತರರು ಉಪಸ್ಥಿತರಿದ್ದರು.