ಮೋರ್ಬಿ ಸೇತುವೆ ದುರಂತ : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ದೂರಿದ ಶಿವಸೇನೆ

ಮೋರ್ಬಿ ಸೇತುವೆ ದುರಂತ : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ದೂರಿದ ಶಿವಸೇನೆ

ಮುಂಬೈ, ನ.1- ಮೋರ್ಬಿ ತೂಗು ಸೇತುವೆ ದುರಂತದಲ್ಲಿ ಗುಜರಾತ್ ಮತ್ತು ಕೇಂದ್ರ ಸರ್ಕಾರದ ಹೊಣೆಗಾರಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಟೀಕಿಸಿದೆ.ಮರಾಠಿ ದೈನಿಕದ ಸಂಪಾದಕೀಯದಲ್ಲಿ ಘಟನೆಗೆ ಖಂಡನೆ ವ್ಯಕ್ತಪಡಿಸಲಾಗಿದೆ.

2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ದುರ್ಘಟನೆ ನಡೆದಿತ್ತು. ಆಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಕೀಯ ಸಮಾವೇಶದಲ್ಲಿ ಭಾಷಣ ಮಾಡಿ, ಅದನ್ನು ದೇವರ ಆಟ ಎಂದಿದ್ದರು. ಪಶ್ಚಮ ಬಂಗಾಳ ಸರ್ಕಾರವನ್ನು ಹೊಣೆಯಾಗಿಸಿದರು.ಈಗ ಗುಜರಾತ್‍ನಲ್ಲಿ ಅದೇ ರೀತಿಯ ದುರಂತ ನಡೆದಿದೆ.

ಅನುಮಾನಾಸ್ಪದವಾಗಿ ಕುಸಿತವಾದ ಸೇತುವೆ ನಿರ್ವಹಣೆ ಮಾಡುತ್ತಿದ್ದ ಕಂಪೆನಿಯ ವಿರುದ್ಧ ತನಿಖೆ ನಡೆಯಬೇಕು, ಅದರ ಜೊತೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹೊಣೆಗಾರಿಕೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ.

ಈ ಘಟನೆಯನ್ನು ವಂಚನೆಯ ಪರಿಣಾಮ ಎನ್ನಬಹುದೇ ? ವ್ಯವಸ್ಥಿತ ಸಂಚು ಎನ್ನಬಹುದೇ? ಸೇತುವೆಯ ಮೇಲೆ ಸಾಮಥ್ರ್ಯ ಮೀರಿ ಜನ ಸೇರಲು ಅವಕಾಶ ನೀಡಿದ್ದರ ಉದ್ದೇಶವೇನು ? ಬ್ರಿಟಿಷರ ಕಾಲದ ಸೇತುವೆ ಮರು ವಿನ್ಯಾಸಗೊಂಡು ಉದ್ಘಾಟನೆಯಾದ ನಾಲ್ಕೆ ದಿನಕ್ಕೆ ಕುಸಿತವಾಗಿದೆ. 134 ಜನರ ಜೀವ ಹಾನಿಯಾಗಿದೆ. ಈ ಹೊಣೆಯಾಗಿಯನ್ನು ಸರ್ಕಾರಗಳು ತಳ್ಳಿ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಎಸ್‍ಐಟಿ ಒಂಬತ್ತು ಮಂದಿಯನ್ನು ಬಂಸಿದೆ. ಸೇತುವೆ ನಿರ್ವಹಣೆ ಮಾಡುತ್ತಿದ್ದ ಕಂಪೆನಿಯ ಮುಖ್ಯಸ್ಥರ ವಿರುದ್ಧವೂ ಕ್ರಮ ಜರುಗಿಸಲಾಗಿದೆ.