ಉತ್ತರಾಖಂಡದಲ್ಲಿ ಭಾರೀ ಮಳೆ: ಮನೆ ಕುಸಿದು ಇಬ್ಬರು ಸಾವು

ಉತ್ತರಾಖಂಡದಲ್ಲಿ ಭಾರೀ ಮಳೆ: ಮನೆ ಕುಸಿದು ಇಬ್ಬರು ಸಾವು

ಉತ್ತರಾಖಂಡ: ಪಿಥೋರಗಡ ಜಿಲ್ಲೆಯ ಧರ್ಚೌಲಾ ಉಪ ವಲಯ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜುಮ್ಮಾ ಎಂಬ ಹಳ್ಳಿಯಲ್ಲಿ ಮೂರು ಮನೆಗಳು ಕುಸಿದು, ಇಬ್ಬರು ಸಾವನ್ನಪ್ಪಿದ್ದಾರೆ.

ಹಲವು ಮಂದಿ ನಾಪತ್ತೆಯಾಗಿದ್ದಾರೆ. ವಿಪತ್ತು ನಿರ್ವಹಣಾ ತಂಡದ ಸದಸ್ಯರು ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಮನೆಗಳು ಕುಸಿದ ಸ್ಥಳದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆಶಿಷ್ ಚೌಹಾಣ್ ತಿಳಿಸಿದ್ದಾರೆ.

'ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಚರ್ಚಿಸಲು ಅಧಿಕಾರಿ ವರ್ಗದ ತುರ್ತು ಸಭೆ ಕರೆಯಲಾಗಿದೆ' ಎಂದು ಜಿಲ್ಲಾಧಿಕಾರಿ ತಿಳಿಸಿದರು.