ಜನ ಸಾಮಾನ್ಯರ ಕಣ್ಮಣಿ ಸವಿತಾ ಅಮರಶೇಟ್ಟಿ,. ಬಿಜೆಪಿ ಅಭ್ಯರ್ಥಿ ಬಟ್ಟೆಣ್ಣವರಗೆ ಸಾಥ್.... | Dharwad |

ಅವಳಿ ನಗರ ಪಾಲಿಕೆ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯ ಅಷ್ಟೇ ಅಲ್ಲದೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಸಹಿತ ಕಣದಲ್ಲಿ ಇದ್ದಾರೆ. ಅಖಾಡದಲ್ಲಿ ಇರುವಂತಾ ಅಭ್ಯರ್ಥಿಗಳು ಮತದಾರರಿಗೆ ಮಣಿ ಹಾಕುವ ಎಲ್ಲಾ ರೀತಿ ಪ್ರಯತ್ನ ನಡೆಸಿದ್ದಾರೆ. ಆದ್ರೆ ಮತದಾರ ಪ್ರಭುಗಳು ಜಯದ ಮಾಲೆ ಯಾರ ಕೊರಳಿಗೆ ಹಾಕ್ತಾರೆ ಎಂಬುವುದು ಕಾದೂ ನೋಡಬೇಕಿದೆ. ಈ ಪೈಕಿ 11ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಬಟ್ಟೆಣ್ಣವರ ಕೂಡಾ ಬಿರುಸಿನ ಪ್ರಚಾರ ನಡೆಸಿದ್ದಾರೆ... ಭಾರತೀಯ ಜನತಾ ಪಾರ್ಟಿಯಲ್ಲಿ ಸುಮಾರು 22,ವರ್ಷಗಳಿಂದ ಸಾಮನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೆನೆ, ನಮ್ಮ ಪಕ್ಷದ ಮುಖಂಡರ ಮೆಚ್ಚುಗೆ ಪಡೆದುಕೊಂಡಿದ್ದೆನೆ. ಅದರಿಂದ ನನ್ನನ್ನು ಗುರ್ತಿಸಿ ನಮ್ಮ ಪಕ್ಷದ ಮುಖಂಡರು ಪಾಲಿಕೆ ಚುನಾವಣೆಗೆ ಟಿಕೇಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ.ದೇಶಾದ್ಯಂತ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬೆಂಬಲದ್ದು. ಅದ್ರಂತೆ ಜನತೆ ಕೂಡಾ ನಮ್ಮ ಪಕ್ಷದ ಪರವಾಗಿ ಇದ್ದಾರೆ, ಜನರ ಅಭಿವೃದ್ಧಿ ಶ್ರೇಯಸ್ಸನ್ನೆ ಬಯಸುವ ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತಾರೆ. ತಮ್ಮ ಸೇವೆ ಮಾಡಲು ಅನುಕೂಲ ಕಲ್ಪಸಿಕೋಡ್ತಾರೆ ಎನ್ನುವ ವಿಶ್ವಾಸ ನಂಗೆ ಇದೆ. ಅಲ್ಲದೆ ನನ್ನ ಪ್ರಮುಖ ಆಶೆಯ ಅಂದ್ರೆ, ಈ ವಾರ್ಡಿನ ಎಲ್ಲಾ ಸಮಸ್ಯೆಗಳನ್ನು ಬಗಿಹರಿಸಿ. ಹನ್ನೊಂದನೆಯ ವಾಡ್೯ನ್ನು ಮಾದರಿ ವಾಡ್೯ಗಿ ಪರಿವರ್ತಿಸತ್ತನೆ, ಇದೊಂದು ಆಶೆ ಹೊಂದಿದ್ದೆನೆ, ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ ಬಟ್ಟೆಣ್ಣವರ ಹೇಳಿದ್ದಾರೆ... 11ನೇ ವಾರ್ಡಿನ ಮತದಾರರಿಗೆ ನಮ್ಮ ಪಕ್ಷದ ಮಹಿಳಾ ಮುಖಂಡೆ ಮತ್ತು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಅನಂತರ 9live ಜೊತೆ ಮಾತನಾಡಿದ ಅವರು, ವಾಡ್೯ನಂಬರ್ 11ರಲ್ಲಿ ಜನತೆ ಅಭಿಪ್ರಾಯ ಬಿಜೆಪಿ ಅಭ್ಯರ್ಥಿ ಮಂಜುನಾಥ ಬಟ್ಟೆಣ್ಣವರ ಪರ ಇದ್ದು, ಇನ್ನು ಒಳ್ಳೆಯ ಪ್ರಾಮಾಣಿಕ ಅಭ್ಯರ್ಥಿ ಆಗಿದ್ದಾರೆ, ಅಭಿವೃದ್ಧಿ ಕಡೆ ಹೆಚ್ಚು ಒತ್ತು ನೀಡುವ ವ್ಯಕ್ತಿಯಾಗಿದ್ದಾರೆ. ಅದ್ರಲ್ಲಿ ಯಾವುದೇ ಅನುಮಾನ ಇಲ್ಲ, ನಮ್ಮ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಜಯಭೇರಿ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು... ಒಟ್ಟಿನಲ್ಲಿ ಪಾಲಿಕೆ ಪ್ರಚಾರದಲ್ಲಿ ಅಭ್ಯರ್ಥಿಗಳ ಪರ ಆಯಾ ಪಕ್ಷದ ಶಾಸಕರು ಸೇರಿದಂತೆ ಮುಖಂಡರು ಭಾಗಿಯಾಗಿ ಪ್ರಚಾರಕ್ಕೆ ಬಾರಿ ಸಾಥ್ ನೀಡುತ್ತಿದ್ದಾರೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿ ಮುಳಗಿದ್ದಾರೆ. ಜನತೆ ಮನಸ್ಸು ಗೆಲ್ಲಲು ಮುಂದಾದರೆ, ಆದ್ರೆ ಮತದಾರ ಪ್ರಭುಗಳು ಯಾರ ಮನಸ್ಸಿಗೆ ಸೋಲ್ತಾರೆ ಎಂಬುವುದು ಕಾದೂ ನೋಡುನಾ..... 9live ಧಾರವಾಡ....