ರಸ್ತೆ ತಗ್ಗು-ಗುಂಡಿಯಲ್ಲಿ ಕೋಳಚೆ ನೀರು, ಸ್ಥಳೀಯರ ಪ್ರತಿಭಟನೆ.

ಧಾರವಾಡ

ಚೇಂಬರ್ ಡ್ರೈನೇಜ್ ಬ್ಲಾಕ್ ಆಗಿ ರಸ್ತೆಯ ಮೇಲೆ ಕೋಳಚೆ ನೀರು ಬಂದು ತಗ್ಗು-ಗುಂಡಿಯಲ್ಲಿ ಕೋಳಚೆ ನೀರು ನಿಂತು, ನಿತ್ಯ ಜನರ ಸಂಚಾರಕ್ಕೆ ಪರದಾಟ ನಡೆಸುವಂತಾಗಿದೆ ಕೂಡಲೇ ರಸ್ತೆ ದುರಸ್ತಿಗಾಗಿ ಆಗ್ರಹಿಸಿ, ಧಾರವಾಡ ಮಣಿಕಂಠ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದ್ರು. ಡ್ರೈನೇಜ್ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ಕೋಳಚೆ ನೀರು ಹರಿಯುತ್ತಿದೆ ಇದರಿಂದ ಜನರಿಗೆ ಅನೇಕ ರೋಗ ಲಕ್ಷಣಗಳು ಕಾಣಿಸಿಕೊಂಡ ತೊಂದರೆ ಉಂಟಾಗುತ್ತಿದೆ ಕೂಡಲೇ ಮಹಾನಗರ ಪಾಲಿಕೆ ಎಚ್ಚೆತ್ತು ರಸ್ತೆ ಹಾಗೂ ಚೇಂಬರ್ ಡ್ರೈನೇಜ್ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ನೀರಿನಿಂದ ತಗ್ಗು-ಗುಂಡಿ ಬಿದ್ದಿದ್ದು ನಿತ್ಯ ಸಾರ್ವಜನಿಕರ ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು