ಜೆಡಿಎಸ್ ಮುಖಂಡ ನಾಗೇಂದ್ರ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ
ತಮಿಳುನಾಡು
ಇಂಡಿಯನ್ ಎಂಪೈರ್ ಯುನಿವರ್ಸಿಟಿ ಹಾಗೂ ಯುನಿವರ್ಸಿಟಿ ಆಫ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ 2021 ನೇ ಸಾಲಿನ ಸಮಾಜ ಸೇವೆ, ರಾಜಕೀಯ, ಯೋಗ, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಜಿ. ನಾಗೇಂದ್ರ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ.
ತಮಿಳುನಾಡಿನ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ನಿವೃತ್ತ ನ್ಯಾಯಧೀಶ ಡಾ. ಜೆ. ಹರಿದಾಸ್ ರವರು ಡಾ.ನಾಗೇಂದ್ರ. ಪಿ.ಅವರಿಗೆ ಹಾನರಿಂಗ್ ಡಾಕ್ಟರೇಟ್ ಪದವಿ ನೀಡಿ ಅಭಿನಂದಿಸಿದರು. ಪದವಿ ಸಮಾರಂಭದಲ್ಲಿ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ. ಮನೋಹರನ್,ಯುಡಿಸಿ ಅಧ್ಯಕ್ಷ ಡಾ. ಸಿ. ಪೌಲ್ ಎಂಬಜಿಲ್, ಉಪಾಧ್ಯಕ್ಷ ಡಾ.ಕೆ. ಪ್ರಭಾಕರ್, ಸಂಯುಕ್ತ ಯೋಗ ಸಂಸ್ಥೆ ಗೌರವ ಅಧ್ಯಕ್ಷೆ ರುಚಿ ಗುಲತಿ ಸೇರಿದಂತೆ ಹಲವು ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು