ಜೆಡಿಎಸ್‌ ಟಿಕೆಟ್‌ ಫೈಟ್‌; ಅಂತರ ಕಾಯ್ದುಕೊಂಡ ಹಾಲಿ ಶಾಸಕರು

ಜೆಡಿಎಸ್‌ ಟಿಕೆಟ್‌ ಫೈಟ್‌; ಅಂತರ ಕಾಯ್ದುಕೊಂಡ ಹಾಲಿ ಶಾಸಕರು

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ 93 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಜಿಲ್ಲೆಯ ಹಾಸನ ಕ್ಷೇತ್ರ, ಅರಕಲಗೂಡು, ಅರಸೀಕೆರೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗಿದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶಾಸಕ ಕೆ.ಎ.ಶಿವಲಿಂಗೇಗೌಡ ಕೂಡ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಇಬ್ಬರು ಶಾಸಕರು ತಾವು ಜೆಡಿಎಸ್‌‌‌‌‌ ತೊರೆಯುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ.