ಬೆಳಗಾವಿಯ MLC ಎಲೆಕ್ಷನ್ ಪ್ರಚಾರ ಕಾರ್ಯದಲ್ಲಿ ಡಿಕೆಶಿ ವಿರುದ್ಧ ಗುಡಿಗಿದ ಗೋಕಾಕ ಸಾಹುಕಾರ | Belagavi |

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಬಿರುಸಿನ ಪ್ರಚಾರ ನಡೆದಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಗೋಕಾಕ ಸಾಹುಕಾರ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡತಾಯಿದ್ದಾರೆ.ಬೆಳಗಾವಿಯಲ್ಲಿ ಪರಿಷತ್ ಚುನಾವಣೆ ಅಖಾಡ ರಂಗೇರಿದೆ. ಅಥಣಿಯಲ್ಲಿ ಪ್ರಚಾರಾರ್ಥವಾಗಿ ಮಾತನಾಡಿದ ಮಾಜಿ ಸಚಿವ ಜಾರಕಿಹೊಳಿ ಅವರು, ದುರಹಂಕಾರ ಮತ್ತು ಗುಂಡಾಗಿರಿ ದರ್ಫದಿಂದ ಮೆರೆಯುತ್ತಿರುವ ಡಿ.ಕೆ. ಶಿವಕುಮಾರ ಅವರಿಗೆ ಪಾಠ ಕಲಿಸಿ ಕಾಂಗ್ರೆಸ್ ಸೋಲಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.ಅಥಣಿ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಸಿಎಂ ಬೊಮ್ಮಾಯಿ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ.ಈ ಭಾಗದ ರೈತರ ಪ್ರಮುಖ ಬೇಡಿಕೆಯಾಗಿರುವ ಬಸವೇಶ್ವರ ಏತ್ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಅತೀ ಶೀಘ್ರದಲ್ಲಿ ಬಸವೇಶ್ವರ ಏತ್ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು.ನಾನು ಸೇರಿದಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಠಳ್ಳಿ ಎಲ್ಲರೂ ಬಿಜೆಪಿಯವರೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತವಾಗಿದೆ ಎಂದರು.ಲಖನ್ ಜಾರಕಿಹೊಳಿ ಅವರು ಪಕ್ಷೇತರರಾಗಿ ಈ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ನಾವಂತೂ ಲಖನ್ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡುವುದರ ಬಗ್ಗೆ ಯೋಚಿಸಿರಲೇ ಇಲ್ಲ. ಕೆಲ ಬದಲಾದ ಸನ್ನಿವೇಶದಲ್ಲಿ ಕಾಂಗ್ರೇಸ್ನ್ನು ಸೋಲಿಸಲೇಬೇಕಾದ ಅನಿವಾರ್ಯತೆಯಿಂದ ಲಖನ್ ಅವರು ಕಣಕ್ಕಿಳಿದಿದ್ದಾರೆಂದು ರಮೇಶ ಜಾರಕಿಹೊಳಿ ಹೇಳಿದರು. ಬಿಜೆಪಿ ಮುಖಂಡರುಗಳು, ಪದಾಧಿಕಾರಿಗಳು, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.