ಪ್ರಧಾನಿ ಮೋದಿ ರೋಡ್‌ಶೋ ನಡೆಸಿದ್ದ ವಾಹನ ಬಂಟ್ವಾಳ ಯಾತ್ರೆಗೆ

ಪ್ರಧಾನಿ ಮೋದಿ ರೋಡ್‌ಶೋ ನಡೆಸಿದ್ದ ವಾಹನ ಬಂಟ್ವಾಳ ಯಾತ್ರೆಗೆ

ಗುಜರಾತ್‌ ಚುನಾವಣೆಯ ವೇಳೆ ಪ್ರಧಾನಿ ಮೋದಿ & ಕೇಂದ್ರ ಸಚಿವ ಅಮಿತ್‌ ಶಾ ರೋಡ್‌ ಶೋ ನಡೆಸಿದ್ದ ವಾಹನ ಬಂಟ್ವಾಳಕ್ಕೆ ಆಗಮಿಸಿದ್ದು, ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್‌‌‌ ನಾಯ್ಕ್‌‌‌‌ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಈ ವಾಹನ ಗಮನ ಸೆಳೆಯಲಿದೆ. ಜ.14-26ರವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ವೇಳೆ ಉಪಯೋಗಿಸುವ ದೃಷ್ಟಿಯಿಂದ ಶಾಸಕರು ಈ ವಾಹನವನ್ನು ಇಸುಝ್ ಕಂಪೆನಿಯ ಮೂಲಕ ತರಿಸಿಕೊಂಡಿದ್ದಾರೆ.