ಚಳಿಗಾಲ ಅಧಿವೇಶನ; ಐದನೇ ದಿನವೂ ತಟ್ಟಿದ ಪ್ರತಿಭಟನೆಯ ಕಾವು

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರು ಚಳಿಗಾಲ ಅಧಿವೇಶನ ಐದನೆ ದಿನಕ್ಕೆ ಕಾಲಿಟ್ಟಿದೆ. ಆದರೂ ಪ್ರತಿಭಟನೆಯ ಕಾವು ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಇಂದು ಕೂಡ ಸರಣಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕೊಂಡಸಕೊಪ್ಪ, ಬಸ್ತವಾಡ ಬಳಿ 11 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿವೆ. ಲವ್ ಜಿಹಾದ್ ವಿರುದ್ಧ ವಿಶೇಷ ಪೊಲೀಸ್ ದಳ ಸ್ಥಾಪಿಸಲು ಆಗ್ರಹಿಸಲಿವೆ. ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಒಂದು ಲಕ್ಷ ಪರಿಹಾರಕ್ಕಾಗಿ ಆಗ್ರಹಿಸಿ ಸ್ವಾಭಿಮಾನಿ ರೈತ ಸಂಘ ಪ್ರತಿಭಟನೆ ನಡೆಸಲಿದ್ದಾರೆ