ಸಂಕ್ರಾಂತಿಗೆ ಅಳಿಯ ಬಂದ ಅಂತಾ 379 ರುಚಿರುಚಿಯಾದ ಆಹಾರ ಮಾಡಿಟ್ಟ ಅತ್ತೆ-ಮಾವ

ಆಂಧ್ರ: ಏಲೂರು ನಗರದ ಭೀಮರಾವ್ & ಚಂದ್ರಲೀಲಾ ದಂಪತಿ ತಮ್ಮ ಮಗಳನ್ನು ಅನಕಾಪಲ್ಲಿಯ ಬುದ್ಧ ಮುರಳಿಧರ್ಗೆ ಕೊಟ್ಟು ಕಳೆದ ವರ್ಷ ವಿವಾಹ ಮಾಡಿದ್ದರು. ಮದುವೆಯ ನಂತರದ ಮೊದಲ ಸಂಕ್ರಾಂತಿ ಇದಾಗಿದ್ದರಿಂದ ಮಗಳು ಮತ್ತು ಅಳಿಯ ಹಬ್ಬಕ್ಕೆ ಬಂದಿದ್ದರು. ಅಳಿಯನ ಆಗಮನದ ಸಂದರ್ಭದಲ್ಲಿ ಏನಾದರೂ ವಿಶೇಷವಾಗಿ ಮಾಡಬೇಕೆಂದು ಮನೆಯವರು ನಿರ್ಧರಿಸಿ 379 ಬಗೆಯ ಖಾದ್ಯಗಳನ್ನು ತಯಾರಿಸಿಟ್ಟರು. ಅದನ್ನು ನೋಡಿ ಅಳೀಮಯ್ಯ ಅತ್ತೆಯ ಪ್ರೀತಿಗೆ, ಮಾವನ ಮಮಕಾರಕ್ಕೆ ಫುಲ್ ಫಿದಾ ಆಗಿದ್ದಾರೆ.