ಅಫ್ಘಾನಿಸ್ತಾನದಿಂದ ಮುಂದಿನ ತಿಂಗಳ ಅಂತ್ಯದೊಳಗೆ ಸೇನೆ ವಾಪಸ್ : ಅಮೆರಿಕಾ ಅಧ್ಯಕ್ಷ ಜೋ ಬೈಡನ್

ಅಫ್ಘಾನಿಸ್ತಾನದಿಂದ ಮುಂದಿನ ತಿಂಗಳ ಅಂತ್ಯದೊಳಗೆ ಸೇನೆ ವಾಪಸ್ : ಅಮೆರಿಕಾ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್‌​: ಅಫ್ಘಾನಿಸ್ತಾನದಿಂದ ಅಮೆರಿಕಾ ದೇಶದ ಸೇನೆಯನ್ನು ಶೀಘ್ರದಲ್ಲೇ ವಾಪಸ್ಸು ಕರೆಸಿಕೊಳ್ಳುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಕಾರ್ಯಾಚರಣೆ ಆಗಸ್ಟ್ 31ಕ್ಕೆ ಮುಗಿಯಲಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕಾ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದನ್ನು ಬೈಡನ್ ಸಮರ್ಥಿಸಿಕೊಂಡರು. ಅಮೆರಿಕಾ ಸೇನಾ ಕ್ರಮಗಳು ಜನರ ಜೀವ ಉಳಿಸಿವೆ ಎಂದು ಅವರು ತಿಳಿಸಿದ್ದಾರೆ.

2001 ರ ಸೆಪ್ಟೆಂಬರ್ 11 ರಂದು ನಡೆದ ಉಗ್ರರ ದಾಳಿಯ ನಂತರ ಕಳೆದ ಸುಮಾರು 20 ವರ್ಷಗಳಿಂದ ಅಮೆರಿಕಾ ಸೇನೆ ಅಫ್ಘಾನಿಸ್ತಾನದಲ್ಲಿ ಹೋರಾಡುತ್ತಿದೆ.

2021 ಸೆಪ್ಟೆಂಬರ್ 11 ಗಡುವಿನೊಳಗೆ ಅಮೆರಿಕಾ ಯೋಧರು ಸ್ವದೇಶಕ್ಕೆ ವಾಪಸ್ಸಾಗಬೇಕು ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಈ ವರ್ಷದ ಆರಂಭದಲ್ಲಿ ಗಡುವು ವಿಧಿಸಿದ್ದರು