ಇಂದು ಬೆಳ್ಳಂಬೆಳಗ್ಗೆ ಉಕ್ರೇನ್‌ನ ಕೈವ್, ಇತರ ನಗರಗಳಲ್ಲಿ ಸರಣಿ ಸ್ಫೋಟ

ಇಂದು ಬೆಳ್ಳಂಬೆಳಗ್ಗೆ ಉಕ್ರೇನ್‌ನ ಕೈವ್, ಇತರ ನಗರಗಳಲ್ಲಿ ಸರಣಿ ಸ್ಫೋಟ

ಕೈವ್ (ಉಕ್ರೇನ್): ಇಂದು ಬೆಳಗ್ಗೆ ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ನಗರದ ಮೇಯರ್ ಅನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲೆ ನಿನ್ನೆ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ಇಂದು ಕೈವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ.

ಇಂದು ಬೆಳಗ್ಗೆ 8:15 ರ ಸುಮಾರಿಗೆ ಕೈವ್‌ನಲ್ಲಿ ಸ್ಫೋಟ ಸಂಭವಿಸಿದ ವರದಿಯಾಗಿದೆ. Lviv, Zhytomyr, Khmelnytsky, Dnipro ಮತ್ತು, Ternopil ನಗರಗಳಲ್ಲಿ ಸ್ಫೋಟಗಳು ವರದಿಯಾಗಿವೆ.

ಸ್ಫೋಟಗೊಂಡ ಸ್ಥಳಗಳಲ್ಲಿ ದಟ್ಟ ಹೊಗೆ ಆವರಿಸಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.