'ಚರ್ಮ ಹದ ಮಾಡುವ ಉದ್ದಿಮೆ'ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಗ್ ಶಾಕ್: 'ರಾಜ್ಯ ಸರ್ಕಾರ' 'ಕನಿಷ್ಠ ವೇತನ ಕಾಯ್ದೆ'ಯಿಂದ ಕೈಬಿಟ್ಟು ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಈ ಹಿಂದೆ ಚರ್ಮ ಹದ ಮಾಡುವ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವಂತ ಕಾರ್ಮಿಕರಿಗೆ ಕನಿಷ್ಠ ವೇತನ ವ್ಯವಸ್ಥೆ ಜಾರಿಗೊಳಿಸಿ ಆದೇಶಿಸಿತ್ತು. ಆದ್ರೇ ಇದೀಗ 1000 ಸಾವಿರಕ್ಕಿಂತ ಕಡಿಮೆ ಇರುವಂತ ಉದ್ದಿಮೆಗಳ ಕಾರ್ಮಿಕರನ್ನು ಈ ಕಾಯ್ದೆಯಿಂದ ಕೈಬಿಟ್ಟು ಆದೇಶಿಸಿದೆ.ಈ ಮೂಲಕ ಬಿಗ್ ಶಾಕ್ ನೀಡಿದೆ.
ಈ ಕುರಿತಂತೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನದ ಪೀಠಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಚರ್ಮ ಹದ ಮಾಡುವ ಉದ್ದಿಮೆ ಈ ಅನುಸೂಚಿತ ಉದ್ದಿಮೆಯನ್ನು ಕನಿಷ್ಠ ವೇತನ ಕಾಯ್ದೆ 1948ರ ಅನುಸೂಚಿಗೆ ಸೇರ್ಪಡೆಗೊಳಿಸಿ, ಈ ಹಿಂದೆ ಅಧಿಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.