ಬೆಂಗಳೂರು: ರಾಜಕುಮಾರ್ ರಸ್ತೆಯಲ್ಲಿ ಮೂರು ಸರ್ಕಾರಿ ಬಸ್​ಗಳ ನಡುವೆ ಡಿಕ್ಕಿ, ಹಲವರಿಗೆ ಗಾಯ

ಬೆಂಗಳೂರು: ರಾಜಕುಮಾರ್ ರಸ್ತೆಯಲ್ಲಿ ಮೂರು ಸರ್ಕಾರಿ ಬಸ್​ಗಳ ನಡುವೆ ಡಿಕ್ಕಿ, ಹಲವರಿಗೆ ಗಾಯ

2 ಕೆಎಸ್‌ಆರ್​ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು: ಮೂರು ಸರ್ಕಾರಿ ಬಸ್​ಗಳು ಡಿಕ್ಕಿ ಹೊಡೆದು, ಬಸ್​ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯವಾದ ಘಟನೆ ಬೆಂಗಳೂರು ನಗರದ ರಾಜ್​ಕುಮಾರ್​ ರಸ್ತೆಯಲ್ಲಿ ಸಂಭವಿಸಿದೆ. 2 ಕೆಎಸ್‌ಆರ್​ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗಲಕೋಟೆ: ಚಿಕ್ಕಪಡಸಲಗಿ ಸೇತುವೆಯ ಮೇಲೆ ಕಾರು ಅಪಘಾತ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಾರು ಅಪಘಾತ ಸಂಭವಿಸಿದೆ. ತಡೆಗೋಡೆ ಮಧ್ಯೆ ಸಿಲುಕಿ ಕಾರು ನೇತಾಡುತ್ತಿದ್ದು, ಕಾರಿನ ಚಾಲಕ ಅಪಘಾತದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಈ ಸಂಬಂಧ ಜಮಖಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.