ನಟ ಚೇತನ್‌ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ದೇಣಿಗೆ ಸಂಗ್ರಹ

ಮೈಸೂರು: ಕೆಲ ದಿನಗಳ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಬೆಂಬಲಿಸಿದ ನಟ ಚೇತನ್ ಅಹಿಂಸಾ ವಿರುದ್ದ ವಿಭಿನ್ನ ಅಭಿಯಾನ ಕೈಗೊಳ್ಳಲಾಗಿದೆ. ಮೈಸೂರಿನ ರಾಷ್ಟ್ರೀಯ ಹಿಂದೂ ಸಮಿತಿಯು ಅಗ್ರಹಾರದ ಪ್ರಮುಖ ರಸ್ತೆ ಅಂಗಡಿಗೆ ತೆರಳಿ ಪೇ ಚೇತನ್ ಫೋಟೋ ಹಿಡಿದು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಚೇತನ್ ನಮ್ಮ ದೇಶದಲ್ಲಿರಲು ಯೋಗ್ಯನಲ್ಲಿ ಆತನನ್ನು ಪಾಕ್‌ಗೆ ಕಳುಹಿಸಬೇಕು ಎಂದು ರಾಷ್ಟ್ರೀಯ ಹಿಂದೂ ಸಮಿತಿ ಅಭಿಯಾನ ಶುರು ಮಾಡಿದ್ದಾರೆ.