ಚುನಾವಣಾ ಆಖಾಡಕ್ಕೆ ಪ್ರಮೋದ್ ಮುತಾಲಿಕ್, ಗುರು ಶಿಷ್ಯರ ಕದನಕ್ಕೆ ವೇದಿಕೆ ಸಿದ್ದ?

ಮಂಗಳೂರು :
ಪ್ರಮೋದ್ ಮುತಾಲಿಕ್ 2023 ಚುನಾವಣೆಗೆ ಸ್ಪರ್ಧೆ ಬಗ್ಗೆ ಈಗಾಗಲೇ ಭಾರೀ ಚರ್ಚೆಯಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 15 ವಿಧಾನಸಭಾ ಕ್ಷೇತ್ರವಿದೆ. ಇದರಲ್ಲಿ 12 ಬಿಜೆಪಿ ಗೆದ್ದಿರುವಂತದ್ದು, ಹಾಗಾಗಿ ಬಿಜೆಪಿ ಭದ್ರ ಕೋಟೆ ಎಂದೇ ಪ್ರಸಿದ್ಧಿ ಪಡೆದಿದೆ.
ಕಳೆದ 5 -6 ತಿಂಗಳಿಂದ ಆಗುತ್ತಿರುವ ಬೆಳವಣಿಗಳು ಕೆಲ ಕಾರ್ಯಕರ್ತರ ಬೇಸರಗಳು ಹೀಗಾಗಿ ಕರಾವಳಿಯಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥರು ಸ್ಪರ್ಧೆ ಮಾಡಬೇಕು ಯುಪಿ ಮಾಡೆಲ್‌ನ ವ್ಯಕ್ತಿ ಎಂದರೆ ಅದು ಪ್ರಮೋದ್ ಮುತಾಲಿಕ್ ಮಾತ್ರ ಅವರು ವಿಧಾನ ಸೌಧದಲ್ಲಿರಬೇಕು. ಅಲ್ಲಿ ನಮ್ಮ ಸಮಸ್ಯೆಗಳನ್ನು ಮಾತನಾಡಬೇಕು.
ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಕಾರ್ಕಳದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ಎಂದು ಕಾರ್ಯಕರ್ತರು ಒತ್ತಡ ಹಾಕಲಾಗುತ್ತಿದೆ. ಈಗಾಗಲೇ ಪ್ರಮೋದ್ ಮುತಾಲಿಕ್ 5 ಕ್ಷೇತ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಪ್ರವಾಸ ಕೈಗೊಂಡಿದ್ದರು. ಈ ವೇಳೆಯೂ ಆರ್‌ಎಸ್‌ಎಸ್, ಶ್ರೀರಾಮಸೇನೆ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.
ಕಾರ್ಕಳ ಸುನಿಲ್ ಕುಮಾರ್ ಅವರ ಮತ ಕ್ಷೇತ್ರ ಇಲ್ಲಿ ಪ್ರವೋದ್ ಮುತಾಲಿಕ್ ನಿಲ್ಲಬೇಕು ಎಂದು ಆ ಭಾಗ ಕೆಲ ಕಾರ್ಯಕರ್ತರಿಂದ ಕೇಳಿ ಬಂದಿದೆ. ಹೀಗಾಗಿ ಗುರು ಶಿಷ್ಯರ ಕದನಕ್ಕೆ ಕಾರಣವಾಗುತ್ತ ಎಂದು ಚರ್ಚೆ ಕೂಡ ನಡೆಯುತ್ತಿದೆ. ಈ ಭಾಗದಲ್ಲಿ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನು ಗೊತ್ತಾಗಿಲ್ಲ. ಹೀಗಾಗಿ ಮುಂದಿನ 2023 ಚುನಾವಣೆಗೆ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ
ವಳಯಲ್ಲಿ ಪ್ರಮೋದ್ ಮುತಾಲಿಕ್ 2023 ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರಿಂದ ಬೇಡಿಕೆ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರೀ ಚರ್ಚೆಗೆ ಗ್ರಾಸವಾಗಿದೆ.