ರಾಜ್ ಬಾವಾಗೆ ಬದಲಿ ಆಟಗಾರನಾಗಿ ಹೊಸ ಆಟಗಾರನಿಗೆ ಮಣೆಹಾಕಿದ ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ಆಟಗಾರನ ಸೇರ್ಪಡೆಯಾಗಿದೆ.
ಅಂಗದ್ ಬಾವಾ ಕಳೆದ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು.ಆದರೆ ಈ ಬಾರಿಯ ಆವೃತ್ತಿಗೂ ಮುನ್ನ ಭುಜದ ನೋವಿನಿಂದಾಗಿ ಟೂರ್ನಿಒಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಯುವ ಆಟಗಾರ ಗುರ್ನೂರ್ ಸಿಂಗ್ ಬ್ರಾರ್‌ಗೆ ಅವಕಾಶ ದೊರೆತಿದೆ. ಎಡಗೈ ಬ್ಯಾಟಿಂಗ್ ಆಲ್‌ರೌಂಡರ್ ಬ್ರಾರ್ ಕಳೆದ ಡಿಸೆಂಬರ್‌ನಲ್ಲಿ ಪಂಜಾಬ್ ಪರವಾಗಿ ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
22ರ ಹರೆಯದ ಯುವ ಆಟಗಾರ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 107 ರನ್‌ಗಳನ್ನು ಗಳಿಸಿದ್ದಾರೆ. 120.22ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು 3.80 ಎಕಾನಮಿಯಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ. ಇದೀಗ ಐಪಿಎಲ್‌ನಂತಾ ದೊಡ್ಡ ವೇದಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಬ್ರಾರ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ.
ಇನ್ನು ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿರುವ ಮೊಹಾಲಿ ಮೂಲದ ಫ್ರಾಂಚೈಸಿ ಈ ಬಾರಿ ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಮೊದಲ ಪಂದ್ಯವನ್ನು ಕೆಕೆಆರ್ ವಿರುದ್ಧ ಗೆದ್ದಿರುವ ಪಂಜಾಬ್ ಇದೀಗ ಎರಡನೇ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲು ಸಿದ್ಧವಾಗುತ್ತಿದೆ.
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಸಿಕಂದರ್ ರಜಾ, ಶಾರುಖ್ ಖಾನ್, ಮೋಹಿತ್ ರಾಥೀ, ಹರ್ಪೀತ್ ಬ್ರಾರ್, ಸ್ಯಾಮ್ ಕರನ್, ರಿಷಿ ಧವನ್, ಬಲ್ತೇಜ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಷೆ, ಜಿತೇಶ್ ಶರ್ಮಾ, ಕಗಿಸೊ ರಬಾಡ, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್, ಶಿವಂ ಸಿಂಗ್, ವಿಧ್ವತ್ ಕಾವೇರಪ್ಪ, ಗುರ್ನೂರ್ ಸಿಂಗ್ ಬ್ರಾರ್