ನಿನ್ನೆ ಸುರಿದ ಮಳೆಯಿಂದ ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆ ನೀರು ಪಾಲು
ನಿನ್ನೆ ಸುರಿದ ಭಾರಿ ಮಳೆಯಿಂದ ಭತ್ತ ಬೆಳೆದ ಅನ್ನದಾತನ ಕಣ್ಣೀರು ಹಾಕುವಂತೆ ಆಗಿದೆ. ಮಳೆ ಪ್ರಮಾಣ ಹೆಚ್ಚಾಗಿದ್ದು, ಕಬ್ಬು, ಭತ್ತ, ಜೋಳದ ಬೆಳೆ ನೆಲಕಚ್ಚಿ ಬಿದ್ದ ಘಟನೆ ಧಾರವಾಡ ತಾಲೂಕಿನ ಅಂಬ್ಲೀಕೊಪ್ಪ, ಮುಗದ ಗ್ರಾಮಗಳಲ್ಲಿ ನಡೆದಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ, ರೈತರ ಪರಿಸ್ಥಿತಿ ನಿನ್ನೆ ಗುಡುಗು ಸಹಿತ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಹಾಗಿದೆ. ಅಂಬ್ಲೀಕೊಪ್ಪ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಹಳ್ಳದಿಂದ ಪಕ್ಕದಲ್ಲಿರುವ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿದ್ದು, 1000 ಕ್ಕೂ ಹೆಚ್ಚು ಎಕರೆ ಬೆಳದಿದ್ದ ಬೆಳೆ ನೀರು ಪಾಲುಗಿವೆ. ಇಷ್ಟೆಲ್ಲಾ ರೈತರಿಗೆ ಸಮಸ್ಯೆ ಎದುರಾದರು ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ ಗ್ರಾಮಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಶಾಸಕರ ವಿರುದ್ದ ಆಕ್ರೋಶ ಹೊರ ಹಾಕಿದರು.ಕಳೆದ ಮೂರು ವರ್ಷಗಳಿಂದ ಪರಿಹಾರ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು...