ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ "ಸೆಕ್ಸ್ ಕಾಲ್' ವೈರಲ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ "ಸೆಕ್ಸ್ ಕಾಲ್' ವೈರಲ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯೊಬ್ಬರ ಜೊತೆ ಇಮ್ರಾನ್ ಸೆಕ್ಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕು ವೈರಲ್ ಆಗಿದೆ. ಕರೆಯಲ್ಲಿ ಇಮ್ರಾನ್ ಅವರು ಮಹಿಳೆಯೊಬ್ಬರಿಗೆ ತನ್ನ ಬಳಿ ಬರುವಂತೆ ಕರೆಯುತ್ತಾರೆ. ಆದರೆ ಮಹಿಳೆ ಇಂದು ಸಾಧ್ಯವಿಲ್ಲ ಮತ್ತೊಂದು ದಿನ ಬರುತ್ತೇನೆ ಎನ್ನುತ್ತಾಳೆ. ಈ ಆಡಿಯೋ ಕ್ಲಿಪ್ ನಕಲಿ ಎಂದಿರುವ ಇಮ್ರಾನ್ ಖಾನ್‍ಪಕ್ಷ ಪಿಟಿಐ, ನಮ್ಮ ಮುಖ್ಯಸ್ಥರ ವಿರುದ್ಧ ನಡೆದಿರುವ ಸಂಚು ಇದು ಎಂದು ಪ್ರತಿಪಾದಿಸಿದೆ.