ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ ಬಿಎಸ್‌ಎಫ್‌ ಸಿಬ್ಬಂದಿ !

ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ ಬಿಎಸ್‌ಎಫ್‌ ಸಿಬ್ಬಂದಿ !

ಪಂಜಾಬ್‌ ವಿಭಾಗದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಪಾಕ್ ಗಡಿಗೆ ನುಗ್ಗಿದ್ದು, ಅವರನ್ನು ಪಾಕಿಸ್ತಾನದ ಪಡೆಯು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಬಿಎಸ್‌ಎಫ್‌ ವಕ್ತಾರ ತಿಳಿಸಿದ್ದಾರೆ. ಸಿಬ್ಬಂದಿ ಅಬೋಹರ್ ವಿಭಾಗದ ಬಿಎಸ್‌ಎಫ್‌ ಜಿಜಿ ಬೇಸ್‌ನಲ್ಲಿರುವ ಇಂಡಿಯಾ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ರೇಖೆಯ ಬಳಿ ತಪಾಸಣೆ ನಡೆಸಿದ್ದರು. ಬೆಳಿಗ್ಗೆ 6.30ಕ್ಕೆ ಮಂಜು ಹೆಚ್ಚಾಗಿದ್ದುದರಿಂದ ಆಕಸ್ಮಿಕವಾಗಿ ಪಾಕ್ ಗಡಿ ರೇಖೆಯನ್ನು ದಾಟಿದ್ದಾರೆ.