ನಟಿ ಸುಧಾ ನರಸಿಂಹರಾಜು ಅವರಿಗೆ ಪೊಲೀಸರಿಂದ ದಿಗ್ಬಂಧನ
ಹಾವೇರಿ: ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಶತಮಾನ ಪುರುಷರ ಗೋಷ್ಠಿಗೆ ತಮ್ಮ ತಂದೆ ಖ್ಯಾತ ನಟ ನರಸಿಂಹರಾಜು ಬಗ್ಗೆ ಮಾತನಾಡಲು ಬಂದಿದ್ದ ಅವರ ಪುತ್ರಿ & ನಟಿ ಸುಧಾ ಸಿಂಹರಾಜು ಅವರಿಗೆ ಪೊಲೀಸರು ಪ್ರಧಾನ ವೇದಿಕೆ ಬಳಿ ದಿಗ್ಬಂಧನ ಹಾಕಿದರು. ಗೋಷ್ಠಿಗೆ ಬಂದಿದ್ದ ನನ್ನನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ವಿಧಿ ಇಲ್ಲದೇ ಒಂದು ತಾಸು ಅಲ್ಲೇ ನಿಂತಿದ್ದೆ. ಕಡೆಗೆ ಸಂಘಟಕರೇ ವಾಪಾಸ್ ಕರೆ ಮಾಡಿ, ಸ್ಥಳಕ್ಕೆ ಬಂದು ಕರೆದೊಯ್ದರು ಎಂದಿದ್ದಾರೆ.