ಡಾ. ಎಸ್ ರಾಧಾಕೃಷ್ಣನ್ ಅವರ 133 ಜಯಂತಿ | Hirekerur |
ಡಾ. ಎಸ್ ರಾಧಾಕೃಷ್ಣನ್ ಅವರ 133 ಜಯಂತಿಯನ್ನು ಹಿರೇಕೆರೂರ ಪಟ್ಟಣದ ಸಿ.ಎಸ್. ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಚರಿಸಲಾಯಿತು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್ ಎಸ್ ಪಾಟೀಲ್ ಮಾತನಾಡಿ, ರಾಷ್ಟ್ರದಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವ ಸ್ಥಾನವಿದೆ. ಶಿಕ್ಷಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಮ್ಮ ಪಾತ್ರ ಹಿರಿದಾದುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಆಡಳಿತ ಅಧಿಕಾರಿಯಾದ ವೀರಭದ್ರಯ್ಯ, ಪ್ರಾಚಾರ್ಯರಾದ ಡಾಕ್ಟರ್ ಎಸ್.ಬಿ. ಚನ್ನಾಗೌಡರ್, ಮುಖ್ಯೋಪಾಧ್ಯಾಯರಾದ ಸುಕುಮಾರ್, ಆರ್ ಎಚ್. ಪೂಜಾರ್ ಬಿ.ವಿ. ಸನೇರ್ ವಿದ್ಯಾಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.