ಮೊಬೈಲ್ ಕಳ್ಳನಿಗೆ ಮಹಿಳೆಯಿಂದ ಬಿಸಿ ಬಿಸಿ ಕಜ್ಜಾಯ | Gadag |
ಗದಗನ ವಿಜಯ ಕಲಾ ಮಂದಿರದ ರಸ್ತೆ ಬಳಿ ಎರಡು ದಿನಗಳ ಹಿಂದೆ ಹೋಟೆಲ್ ಯಜಮಾನಿ ಬಳಿ ಕರೆ ಮಾಡಲು ಮೊಬೈಲ್ ಬೇಕಾಗಿದೆ ಎಂದು ಸುಳ್ಳು ಹೇಳಿ ಮೊಬಾಯಿಲ್ ಇಸ್ಕೊಂಡು ಎಸ್ಕೇಪ್ ಆಗಿದ್ದ ಕಳ್ಳನನ್ನು ಇಂದು ಹಿಡಿದು ಮಹಿಳೆ ಕಪಾಳಮೋಕ್ಷ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈತ ವೃತ್ತಿಯಿಂದ ಖತರ್ನಾಕ್ ಕಳ್ಳ ಎಂದು ತಿಳಿದು ಬಂದಿದೆ. ಮೊಬಾಯಿಲ್ ಮತ್ತು ಹಲವಾರು ಬೈಕಗಳನ್ನು ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದೆ. 9ಲೈವ್ ಗದಗ್