ಬಿಜೆಪಿಗೆ ಶಿವರಾಮೇಗೌಡ ಬರ್ತಾರೆಂಬ ಸುದ್ದಿ ಹರಿದಾಡ್ತಿದ್ದಂತೆ ಫೈಟರ್ ರವಿ ಎದೆಯಲ್ಲಿ ಆತಂಕ ಶುರು!

ಬೆಂಗಳೂರು: ಜೆಡಿಎಸ್ನಿಂದ ಉಚ್ಛಾನೆಗೊಂಡಿದ್ದ ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮಂಡ್ಯದ ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ.
ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುಲು ಫೈಟರ್ ರವಿ ಒಲವು ತೋರಿದ್ದಾರೆ.
ಇದೀಗ ಫೈಟರ್ ರವಿ ನಡೆ ಬಿಜೆಪಿಗೆ ಹೊಸ ತಲೆನೋವಾಗಿದೆ. ಶಿವರಾಮೇಗೌಡ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ಲಾನ್ ಮಾಡಿದ್ದಾರೆ. ಸಿಎಂ ಸೇರಿದಂತೆ ಬಿಜೆಪಿ ರಾಜ್ಯ ನಾಯಕನ್ನು ಕರೆಸಿ ನಾಗಮಂಗಲದಲ್ಲೇ ಬಿಜೆಪಿ ಸೇರಲು ಶಿವರಾಮೇಗೌಡ ತಯಾರಿ ನಡೆಸಿದ್ದಾರೆ.
ಶಿವರಾಮೇಗೌಡರ ನಡೆಯಿಂದ ಬಿಜೆಪಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದ ರೌಡಿಶೀಟರ್ ಫೈಟರ್ ರವಿಗೆ ಆಘಾತವಾಗಿದೆ. ನಾಗಮಂಗಲ ಟಿಕೆಟ್ ಸಿಗುವ ಭರವಸೆಯಲ್ಲಿಯೇ ಫೈಟರ್ ರವಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ. ಕ್ಷೇತ್ರದಲ್ಲಿ ಹಲವು ಬಿಜೆಪಿ ಕಾರ್ಯಕ್ರಮಗಳನ್ನು ರವಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ. ಇದೀಗ ಶಿವರಾಮೇಗೌಡ ಎಂಟ್ರಿಯಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.ಇತ್ತ ಟಿಕೆಟ್ ಸಿಗುವುದು ಅನುಮಾನ ಎಂದು ಗೊತ್ತಾಗುತ್ತಿದ್ದಂತೆ ಬಂಡಾಯವೇಳಲು ಫೈಟರ್ ರವಿ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಂಡಾಯವಾದ್ರು ಸರಿಯೇ ಸ್ಪರ್ಧೆ ಖಚಿತ ಎಂದು ಫೈಟರ್ ರವಿ ಹೇಳುತ್ತಿದ್ದಾರೆ. ನಾನು ಬೇರೆಯವರ ಗೆಲ್ಲಿಸಲು ಅಥವಾ ಸೋಲಿಸಲು ರಾಜಕಾರಣಕ್ಕೆ ಬಂದಿಲ್ಲ. ನಾನು ಗೆಲ್ಲುವುದ್ದಕ್ಕಾಗಿಯೇ ರಾಜಕಾರಣಕ್ಕೆ ಬಂದ್ದಿದ್ದೇನೆ ಎಂದು ಆಪ್ತ ವಲಯದಲ್ಲಿ ಹೇಳಿಕೊಳ್ಳುತ್ತಿರುವ ಫೈಟರ್ ರವಿ, ಶಾಸಕ ಸುರೇಶಗೌಡ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್)