2024ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ್’; ಕೇಂದ್ರ

ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಯೋಜನೆ ‘ಗಗನಯಾನ್’ 2024ರ 4ನೇ ತ್ರೈಮಾಸಿಕದಲ್ಲಿ ಸಾಕಾರಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಕೇಂದ್ರ ವಿಜ್ಞಾನ & ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲೋಕಸಭೆಗೆ ಉತ್ತರ ನೀಡಿದ್ದಾರೆ. ಸಿಬ್ಬಂದಿ ಸುರಕ್ಷತೆಗಾಗಿ ಅಂತಿಮ ಹಂತದ ಯೋಜನೆ ಸಾಕಾರಕ್ಕೂ ಮುನ್ನ ಸಿಬ್ಬಂದಿರಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗುವುದು. ಇದರ ಫಲಿತಾಂಶ ನೋಡಿಕೊಂಡು ಮಾನವಹಸಹಿತ ಯಾನ ಕೈಗೊಳ್ಳಲಾಗುವುದು ಎಂದರು.