ನಾಳೆಯಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ : ಎಷ್ಟಿದೆ ಶುಲ್ಕ..?
ಬೆಂಗಳೂರು: ಫೆ.28ರಿಂದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಲಿದೆ.ರಾಷ್ಟ್ರೀಯ ಹೆದ್ದಾರಿ -275 ಭಾಗ, ಬೆಂಗಳೂರು-ನಿಡಘಟ್ಟ ವಿಭಾಗದ 6 ಲೇನ್ ಬಳಕೆಗಾಗಿ ಟೋಲ್ ಶುಲ್ಕಗಳು ನಾಳೆಯಿಂದ ಜಾರಿಯಾಗಲಿದೆ.
ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳು ಟೋಲ್ ಕಟ್ಟಬೇಕಾಗಿದೆ.
ಟೋಲ್ ದರ ಪಟ್ಟಿ ಹೀಗಿದೆ
ಕಾರು, ಜೀಪ್, ವ್ಯಾನ್ಗಳಿಗೆ
• ಏಕಮುಖ ಸಂಚಾರ ಕ್ಕೆ : 135 ರೂ.
• ಅದೇ ದಿನ ವಾಹನಗಳು ಮರು ಸಂಚಾರ: 205 ರೂ.
• ಸ್ಥಳೀಯ ವಾಹನಗಳಿಗೆ: 70 ರೂ.
• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ದರ: 4525 ರೂ.
• ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು, ಮಿನಿ ಬಸ್ಗಳು
• ಏಕಮುಖ ಸಂಚಾರಕ್ಕೆ: 220 ರೂ.
• ಅದೇ ದಿನ ಮರು ಸಂಚಾರಕ್ಕೆ: 320 ರೂ.
• ಸ್ಥಳೀಯ ವಾಹನಗಳುಕ್ಕೆ: 110 ರೂ.
• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 7315 ರೂ.
• ಬಸ್ ಅಥವಾ ಟ್ರಕ್ (ಎರಡು ಆಯಕ್ಸೆಲ್ ವಾಹನಗಳಿಗೆ)
ಏಕಮುಖ ಸಂಚಾರಕ್ಕೆ: 460 ರೂ.
• ಅದೇ ದಿನ ಮರು ಸಂಚಾರಕ್ಕೆ: 690 ರೂ.
• ಸ್ಥಳೀಯ ವಾಹನಗಳಿಗೆ 230 ರೂ.
• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 15,325 ರೂ.
• ವಾಣಿಜ್ಯ ವಾಹನಗಳು (ಮೂರು ಆಯಕ್ಸೆಲ್ ವಾಹನಗಳಿಗೆ)
• ಏಕಮುಖ ಸಂಚಾರಕ್ಕೆ: 500ರೂ.
• ಅದೇ ದಿನ ಮರು ಸಂಚಾರ: 750 ರೂ.
ಸ್ಥಳೀಯ ವಾಹನಗಳಿಗೆ 250 ರೂ.
• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ : 16,715 ರೂ.
• ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆಯಕ್ಸೆಲ್ ವಾಹನ (6ರಿಂದ 8 ಆಯಕ್ಸೆಲ್ ವಾಹನಕ್ಕೆ)
• ಏಕಮುಖ ಸಂಚಾರಕ್ಕೆ 720 ರೂ.
• ಅದೇ ದಿನ ಮರು ಸಂಚಾರ: 1080 ರೂ.
• ಸ್ಥಳೀಯ ವಾಹನಗಳಿಗೆ 360 ರೂ.
• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 24,030 ರೂ.
• ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್ ವಾಹನಕ್ಕೆ)
• ಏಕಮುಖ ಸಂಚಾರ: 880 ರೂ.
• ಅದೇ ದಿನ ಮರು ಸಂಚಾರ: 1315 ರೂ.
• ಸ್ಥಳೀಯ ವಾಹನಗಳಿಗೆ 440 ರೂ.
• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 29,255 ರೂ.