ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ 58 ವರ್ಷದ ಕಾಮುಕನಿಗೆ 20 ವರ್ಷ ಜೈಲು ಶಿಕ್ಷೆ
ಹೊಸೂರು(ತಮಿಳುನಾಡು): 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ 58 ವರ್ಷದ ಕಾಮುಕನಿಗೆ ಕೃಷ್ಣಗಿರಿ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕೃಷ್ಣಗಿರಿ ಜಿಲ್ಲೆಯ ಮತ್ತೂರು ಸಮೀಪದ ಶಿವಂಪಟ್ಟಿ ಗ್ರಾಮದ ಕೂಲಿ ಕಾರ್ಮಿಕ ಸುಂದರಂ (58) ಶಿಕ್ಷೆಗೆ ಗುರಿಯಾದವ.
ದೂರು ಸ್ವೀಕರಿಸಿದ ಪೊಲೀಸರು ಸುಂದರಂನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ಕೃಷ್ಣಗಿರಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಲತಾ ಅವರು ಪ್ರಕರಣದಲ್ಲಿ ಸುಂದರಂ ದೋಷಿ ಎಂದು ಘೋಷಿಸಿ, ಜೈಲುಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.