ಒಲಿಂಪಿಕ್ಸ್ ಕಂಚು ವಿಜೇತ, ಭಾರತ ಹಾಕಿ ತಂಡದ ಡಿಫೆಂಡರ್ ʼರೂಪಿಂದರ್ ಪಾಲ್ ಸಿಂಗ್ʼ ನಿವೃತ್ತಿ ಘೋಷಣೆ
ಡಿಜಿಟಲ್ ಡೆಸ್ಕ್: ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತೀಯ ಹಾಕಿ ತಂಡದ ಸದಸ್ಯ ರೂಪಿಂದರ್ ಪಾಲ್ ಸಿಂಗ್ ಗುರುವಾರ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ.
30 ವರ್ಷದ ಡಿಫೆಂಡರ್ ತಮ್ಮ 12 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವುದಾಗಿ ಟ್ವಿಟರ್ʼನಲ್ಲಿ ಘೋಷಣೆ ಮಾಡಿದ್ದಾರೆ. 'ಭಾರತೀಯ ಹಾಕಿ ತಂಡದಿಂದ ನಿವೃತ್ತಿ ಹೊಂದುವ ನನ್ನ ನಿರ್ಧಾರದ ಬಗ್ಗೆ ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಕಳೆದ ಒಂದೆರಡು ತಿಂಗಳುಗಳು ನಿಸ್ಸಂದೇಹವಾಗಿ ನನ್ನ ಜೀವನದ ಅತ್ಯುತ್ತಮ ದಿನಗಳು. ಟೋಕಿಯೋದ ವೇದಿಕೆಯ ಮೇಲೆ ನನ್ನ ತಂಡದ ಆಟಗಾರರೊಂದಿಗೆ ನಾನು ನನ್ನ ಜೀವನದ ಕೆಲವು ನಂಬಲಾಗದ ಅನುಭವಗಳನ್ನ ಹಂಚಿಕೊಂಡಿದ್ದೇನೆ, ಅದು ನಾನು ಶಾಶ್ವತವಾಗಿ ಪ್ರೀತಿಸುವ ಭಾವನೆಯಾಗಿದೆ' ಎಂದಿದ್ದಾರೆ.