ಎಐಎಂಐಎಂ ಪಕ್ಷದಿಂದ ಪ್ರತಿಭಟನೆ | Dharwad | AIMIM |

ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ ಬಗ್ಗೆ ಅವಹೇಳನಕಾರಿ ತಪ್ಪು ಮಾಹಿತಿಯನ್ನು ಪುಸ್ತಕದಲ್ಲಿ ಬರೆದಿದ್ದು ಖಂಡಿಸಿ, ಜಿಲ್ಲಾ ಹಬ್ಬಳ್ಳಿ, ಶಹರ ಎಐಎಂಐಎಂ ಪಕ್ಷದಿಂದ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಎಐಎಂಐಎಂ ಸಂಘಟನೆ ಕಾರ್ಯಕರ್ತರು ಇಂತಹ ಅವಹೇಳನ ಕೃತ್ಯ ಎಸಗಿದ ವಸೀಮ್ ರಿಜ್ವಿ ಮಾಜಿ ಸಿಯಾ ಬೋರ್ಡ್ ಚೇರ್ಮನ್ ಕಿಡಿಗೇಡಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಿಡಿಗೇಡಿ ವಸಿಮ್ ರಿಜ್ವಿನನ್ನು ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.