ನೂತನ ಸಚಿವರ ಬಗ್ಗೆ ನೋ ಕಮೆಂಟ್ಸ್ ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿಕ್ರಿಯೆ | Hubli | JagdishShatter | BJ
ಹುಬ್ಬಳ್ಳಿ ನೂತನ ಸಚಿವರಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಖ್ಯಾತೆ ನಡೆದಿರುವುದರ ಬಗ್ಗೆ, ನಾನೇನು ಹೇಳಲು ಬಯಸುವುದಿಲ್ಲ, ನಾನು ಮಾಜಿ ಸಿಎಂ ಇರುವುದರಿಂದ ಎಲ್ಲ ಸಚಿವರು ಸಹಜವಾಗಿ ಬಂದು ಭೇಟಿ ಆಗ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಆನಂದ ಸಿಂಗ್ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವಿಚಾರದಲ್ಲಿ, ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿ ಈ ಬಗ್ಗೆ ಮಾತನಾಡುತ್ತೇನೆ, ಖಾತೆ ಹಂಚಿಕೆ ವಿಚಾರದಲ್ಲಿ ಸಮಾಧಾನ, ಅಸಮಾಧಾನ ಇರುವುದ ಸಹಜ, ನನ್ನ ಮನಸ್ಸಲ್ಲಿರುವುದನ್ನ ನಾನು ಬಹಿರಂಗವಾಗಿ ಹೇಳಲು ಬಯಸುವುದಿಲ್ಲ, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಅಭಿಪ್ರಾಯ ಹೇಳುತ್ತೇನೆ ಎಂದರು.