'ಮೆಟ್ರೋ ಪ್ರಯಾಣಿಕ'ರಿಗೆ ಗುಡ್ ನ್ಯೂಸ್ : ಬಿಎಂಟಿಸಿಯಿಂದ 'ಮೆಟ್ರೋ ಫೀಡರ್ ಸಾರಿಗೆ ಸಂಚಾರ' ಪ್ರಾರಂಭ

'ಮೆಟ್ರೋ ಪ್ರಯಾಣಿಕ'ರಿಗೆ ಗುಡ್ ನ್ಯೂಸ್ : ಬಿಎಂಟಿಸಿಯಿಂದ 'ಮೆಟ್ರೋ ಫೀಡರ್ ಸಾರಿಗೆ ಸಂಚಾರ' ಪ್ರಾರಂಭ
ಬೆಂಗಳೂರು : ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ( Mysuru Road Metro Station ) ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ( Metro Train ) ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ, ಬಿಎಂಟಿಸಿಯಿಂದ ( BMTC Bus ) ಮೆಟ್ರೋ ಫೀಡರ್ ಸಾರಿಗೆಗಳನ್ನು ಪ್ರಾರಂಭಿಸುತ್ತಿರೋದಾಗಿ ಬಿಎಂಟಿಸಿ ತಿಳಿಸಿದೆ. ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮವು, ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆಯನ್ನು ದಿನಾಂಕ 29-08-2021ರಿಂದ ಜಾರಿಗೆ ಬಂರುವಂತೆ ಪ್ರಾರಂಭಿಸುತ್ತಿದೆ. ಪ್ರಯಾಣಿಕರ ಮೆಟ್ರೋ ಫೀಡರ್ ಸಾರಿಗೆ ಸೇವೆಯು ದಿನಾಂಕ 30-08-2021ರಿಂದ ಲಭ್ಯವಾಗಲಿದೆ.ಮೈಸೂರು ರಸ್ತೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಸ್ಥೆಯು 35 ಬಸ್ಸುಗಳಿಂದ 9 ಮಾರ್ಗಗಳಲ್ಲಿ 499 ಸುತ್ತುವಳಿಗಳೊಂದಿಗೆ ಮೆಟ್ರೋ ಫೀಡರ್ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪರಿಶೀಲಿಸಿ, ಮೆಟ್ರೋ ಫೀಟರ್ ಸೇವೆಗಳಲ್ಲಿ ಅಗತ್ಯ ಬದಲಾವಣೆ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.