ಜಲಾಂತರ್ಗಾಮಿ 'ಐಎನ್‌ಎಸ್ ಅರಿಹಂತ'ದಿಂದ ಕ್ಷಿಪಣಿಯ ಯಶಸ್ವಿ ಉಡಾವಣೆ

ನವದೆಹಲಿ: ಜಲಾಂತರ್ಗಾಮಿ 'ಐಎನ್‌ಎಸ್ ಅರಿಹಂತ'ದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನುಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ಬಂಗಾಳ ಕೊಲ್ಲಿಯಲ್ಲಿ ಪೂರ್ವನಿರ್ಧರಿತ ಗುರಿಯನ್ನು ಈ ಕ್ಷಿಪಣಿಯು ಬಹಳ ನಿಖರವಾಗಿ ತಲುಪಿತು.
ಈ ಕ್ಷಿಪಣಿ ವ್ಯವಸ್ಥೆಯನ್ನು 'ಜಲಾಂತರ್ಗಾಮಿಯಿಂದ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ' ಎನ್ನಲಾಗುತ್ತದೆ. ಅಣ್ವಸ್ತ್ರ ದಾಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯವನ್ನು ಈ ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಇಂಥ ಕ್ಷಿಪಣಿ ವ್ಯವಸ್ಥೆಯೂ ಆಗಿದೆ.
'ಐಎನ್‌ಎಸ್ ಅರಿಹಂತ' ಜಲಾಂತರ್ಗಾಮಿಯು 750 ಕಿ.ಮೀಹಾಗೂ 3,500 ಕಿ.ಮೀ.ದೂರಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.