ಫೆ. 14 ರಿಂದ 16 ರ ವರೆಗೆ ಉಡುಪಿಯಲ್ಲಿ 'ಕಲಿಕಾ ಹಬ್ಬ' ಆಯೋಜನೆ
ಉಡುಪಿ : ಶಿಕ್ಷಣ ಇಲಾಖೆಯ ವತಿಯಿಂದ ಫೆಬ್ರವರಿ 14 ರಿಂದ 16 ರ ವರೆಗೆ ಕುಂದಾಪುರದಲ್ಲಿ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೂರಕವಾಗಿ ಮಕ್ಕಳ ಕಲಿಕಾ ಚಟುವಟಿಕೆ ಆಧಾರಿತ ಕಲಿಕಾ ಚೇತರಿಕೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಫೆಬ್ರವರಿ 14 ರಿಂದ 16 ರ ವರೆಗೆ ಕುಂದಾಪುರ ತಾಲೂಕು ಸಿದ್ಧಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.