ಬೆಲೆ ಏರಿಕೆ ಕಾಂಗ್ರೆಸ್ ಅವಧಿಯಲ್ಲಿ ಇದ್ದಷ್ಟಿಲ್ಲ; ಸಿ.ಟಿ ರವಿ | Chikkamagalur |

ಪ್ರತಿಭಟನೆ, ಚಳುವಳಿ ಮಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ, ಬೆಲೆ ಏರಿಕೆ ಕಾಂಗ್ರೆಸ್ ಅವಧಿಯಲ್ಲಿ ಇದ್ದಷ್ಟು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ ತೈಲ ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಮಾಡುವಷ್ಟರ ಮಟ್ಟಿಗೆ ಈಗ ಬೆಲೆ ಏರಿಕೆ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರದ ಕಾರಣಕ್ಕಾಗಿ ಬೆಲೆ ಏರಿಕೆ ಆಗಿತ್ತು ಜಗತ್ತೇ ಇಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಇದರ ಫಲ ಬೆಲೆ ಏರಿಕೆ. ಜಾಗತಿಕವಾಗಿ ಬೆಲೆ ಏರಿಕೆ ಕೋವಿಡ್ ಕಾರಣಕ್ಕಾಗಿ ಆಗಿದೆ ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆ ಇದು ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು.