ಮೋಹಕ ತಾರೆಗೆ ನುಗ್ಗೆ ಕಾಯಿ ಇಷ್ಟ ಇಲ್ವಂತೆ-ಹಾಲು ಕುಡಿಯಲ್ವಂತೆ!

ಮೋಹಕ ತಾರೆಗೆ ನುಗ್ಗೆ ಕಾಯಿ ಇಷ್ಟ ಇಲ್ವಂತೆ-ಹಾಲು ಕುಡಿಯಲ್ವಂತೆ!

ಮೋಹಕ ತಾರೆ, ಸ್ಯಾಂಡಲ್ ವುಡ್ ನಟಿ ರಮ್ಯಾ ಸೋಷಿಯಲ್ ಮೀಡಿಯಾದಿಂದ ಒಂಚೂರು ದೂರನೇ ಉಳಿದಿದ್ದರು. ಇದ್ದಕ್ಕಿದ್ದಂತೆ ಇನ್ ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದ ನಟಿ, ತಮ್ಮ ಕೆಲವೊಂದು ಪರ್ಸನಲ್ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಹೌದು ನಟಿ ರಮ್ಯಾ ಲೈವ್ ನಲ್ಲಿ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ಮಾತನಾಡಿದ ರಮ್ಯಾ ನಾನು ಮಶ್ರೂಮ್, ಬದನೆಕಾಯಿ, ಇಡ್ಲಿ, ಐಸ್​ಕ್ರೀಮ್ ತಿಂತೀನಿ. ಆದ್ರೆ ಇಡ್ಲಿಯನ್ನ ಸಾಂಬಾರ್ ಜೊತೆ ಯಾವತ್ತೂ ತಿನ್ನೋಕೆ ಇಷ್ಟಪಡಲ್ಲ. ಚಟ್ನಿ ಜೊತೆಯಲ್ಲಿ ತಿಂತೀನಿ ಎಂದಿದ್ದಾರೆ. ಇದೇ ವೇಳೆ ಮತ್ತೊಂದು ಮಾಹಿತಿಯನ್ನು ಹೇಳಿತ ನಟಿ, ನನಗೆ ನುಗ್ಗೆಕಾಯಿ ಅಂದ್ರೆ ಇಷ್ಟವಿಲ್ಲ. ಹಾಲನ್ನೂ ಕುಡಿಯಲ್ಲ ಎಂದಿದ್ದಾರೆ.

ನಾನಿನ್ನು ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ

ಇದೇ ವೇಳೆ ಅಭಿಮಾನಿಗಳು ನೀವು ವ್ಯಾಕ್ಸಿನ್ ಹಾಕಿಸಿಕೊಂಡ್ರಾ ಎಂದು ಹೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ, ನಾನು ಅಮೆರಿಕಾದ ವ್ಯಾಕ್ಸಿನ್​ಗೆ ಕಾಯ್ತಿದ್ದೀನಿ. ನಾನಿನ್ನೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಾನು ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್​ನ್ನು ಮೂರು ಡೋಸ್ ತಗೋಬೇಕು ಅಂತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಕ್ರಿಯೇಟ್ ಆಗಿದೆ. ಮೊಡೆರ್ನಾಗೆ ಸದ್ಯ ಅನುಮತಿ ಸಿಕ್ಕಿರುವುದು ನನಗದು ಖುಷಿಯ ವಿಚಾರ ಎಂದಿದ್ದಾರೆ.