ಹೊಸ ಗೆಟಪ್‍ನಲ್ಲಿ ನಟಿ ಐಶಾನಿ ಶೆಟ್ಟಿ
ಇದಾಗಲೇ ಅನೇಕ ಚಿತ್ರಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿರುವ ನಟಿ ಐಶಾನಿ ಶೆಟ್ಟಿ, ಇದೀಗ ವಿಭಿನ್ನ ಗೆಟಪ್ ಮೂಲಕ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಸದ್ಯ ಐಶಾನಿ 'ಹೊಂದಿಸಿ ಬರೆಯಿರಿ' ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಚಿತ್ರ ಇದೇ ಫೆಬ್ರವರಿ 10ರಂದು ಬಿಡುಗಡೆ ಆಗಲಿದೆ. ಐಶಾನಿ ಈ ಚಿತ್ರದಲ್ಲಿ ಕೂದಲಿಗೆ ಕತ್ತರಿ ಹಾಕಿ ಮಡಿಕೇರಿಯ 'ಸನಿಹ ಪೊನ್ನಪ್ಪ' ಎಂಬ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.