ಚಪ್ಪಲಿ ಎಸೆದ ಘಟನೆ; ಕಿಚ್ಚನಿಗೆ ಧನ್ಯವಾದ ತಿಳಿಸಿದ ನಟ ದರ್ಶನ್
ಚಪ್ಪಲಿ ಎಸೆದ ಘಟನೆ ಬಗ್ಗೆ ನಟ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಈ ಸಮಯದಲ್ಲಿ ನ್ಯಾಯದ ಪರ ನಿಂತ ಚಿತ್ರರಂಗದ ಪ್ರತಿಯೊಬ್ಬ ಗೆಳೆಯರು, ನಟರಿಗೆ ಧನ್ಯವಾದಗಳು ಎಂದು ಬರೆದು ಧನ್ಯವಾದ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ಸುದೀಪ್ ಅವರಿಗೂ "ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು" ಎಂದು ಬರೆದು ಟ್ವೀಟ್ ಮಾಡಿದ್ದಾರೆ.