ಪೊಲೀಸರ ಕುಂದುಕೊರತೆ ಆಲಿಸಿದ ಸಚಿವ | Police Commissioner | Hubli Dharwad |
ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಭೆ ಮಾಡುವ ಮೂಲಕ ಅವರ ಕುಂದುಕೊರತೆಗಳನ್ನು ಆಲಿಸಿ ಅವರಿಗೆ ಸಲಹೆ ಸೂಚನೆಗಳನ್ನು ನೀಡುವ ಕೆಲಸವನ್ನು ಮಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದ ಪೆÇೀಲಿಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಗೆ ಇನ್ನಷ್ಟು ಪೊಲೀಸ್ ಠಾಣೆ ಬಗ್ಗೆ ಕೂಡಾ ಚರ್ಚಿಸಲಾಗಿದೆ. ಅವರು ಪ್ರೊಪೋಸಲ್ ಪೆÇ್ರಪೆÇೀಸಲ್ ಕಳಿಸಿದ್ರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇನ್ನೂ ಮಾಜಿ ಸಚಿವ ಶಿವರಾಜ ತಂಗಡಗಿ ಡ್ರಗ್ಸ್ ವಿಷಯವಾಗಿ ಅನುಶ್ರೀ ತನಿಖೆ ನಡೆಸುವ ವಿಚಾರವಾಗಿ ಮೊದಲು ಬಿಜೆಪಿಯ ಸಿಟಿ ರವಿ, ಗೃಹ ಸಚಿವರನ್ನು ಪರೀಕ್ಷೆಗೊಳಪಡಿಸಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಹೇಳಿಕೆಗೆ ಅರ್ಥಾ ಇದೆಯಾ. ಈ ರೀತಿ ರಾಜಕೀಯವಾಗಿ ಲಘುವಾಗಿ ಮಾತಾಡ್ತಾರೆ ಅಂದ್ರೆ ಏನು ಹೇಳೋಣ ಎಂದರು.